ಲೇಹ್ (ಲಡಾಖ್): ಇಂದು ಬೆಳ್ಳಂಬೆಳಗ್ಗೆ ಲಡಾಖ್‌ನ ಲೇಹ್ನಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ರಷ್ಟು ತೀವ್ರತೆ ದಾಖಲಾಗಿದೆ.
ಲೇಹ್ನಲ್ಲಿ 4.6ರಷ್ಟು ತೀವ್ರತೆಯ ಭೂಕಂಪನ - ಲೇಹ್ನಲ್ಲಿ ಭೂಕಂಪನ ಸುದ್ದಿ
ಕೇಂದ್ರಾಡಳಿತ ಪ್ರದೇಶ ಲಡಾಕ್‌ನಲ್ಲಿ ಒಂದು ತಿಂಗಳ ಬಳಿಕ ಮತ್ತೆ ಭೂಮಿ ಕಂಪಿಸಿದೆ.
ಲೇಹ್ನಲ್ಲಿ ಮತ್ತೆ ಕಂಪಿಸಿದ ಭೂಮಿ
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಬೆಳಿಗ್ಗೆ 6:10 ರ ಸುಮಾರಿಗೆ ಭೂಕಂಪನವಾಗಿದೆ. 18 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಪ್ರಸ್ತುತ ವರದಿಗಳ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.
ಕಳೆದ ತಿಂಗಳು ಸಹ ಲಡಾಖ್ನಲ್ಲಿ ಭೂಕಂಪನ ಸಂಭವಿಸಿತ್ತು. ಸತತ ಎರಡು ದಿನಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಈ ವೇಳೆ ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿತ್ತು. ಇದಕ್ಕೂ ಮೊದಲು ಮಾರ್ಚ್ 6 ರಂದು 3.6 ತೀವ್ರತೆಯ ಭೂಕಂಪನ ಜರುಗಿತ್ತು.