ಮಧುರೈ:ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿದ್ದು, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸ್ ಉನ್ನತಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಏನಿದು ಘಟನೆ: ಫೆಬ್ರವರಿ 14 ರಂದು ಯುವಕನೊಬ್ಬ ತನ್ನ 17 ವರ್ಷದ ಗೆಳತಿಯೊಂದಿಗೆ ಮೇಲೂರಿನಿಂದ ಪರಾರಿಯಾಗಿದ್ದ. ವಿಷಯ ತಿಳಿದ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಬಾಲಕಿಯ ಹುಡುಕಾಟಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು.
ಓದಿ:ಸಿಎಎ ಕಾಯ್ದೆ: ಇನ್ನೂ ಸಿದ್ಧವಾಗದ ನಿಯಮಗಳು!
ಮಾರ್ಚ್ 3 ರಂದು ತನ್ನ ಗೆಳತಿಯನ್ನು ಆಕೆಯ ಮನೆಗೆ ಡ್ರಾಪ್ ಮಾಡಿದ್ದ. ಆದರೆ, ಬಾಲಕಿ ಅಸ್ವಸ್ಥಗೊಂಡಿದ್ದರಿಂದ ಅವರ ತಾಯಿ ಮೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಧುರೈ ಜಿಲ್ಲಾ ಎಸ್‌ಪಿ ಬಾಸ್ಕರನ್, ತನಿಖೆಯ ವೇಳೆ ಬಾಲಕಿ ಆ ಯುವಕನೊಂದಿಗೆ ಈರೋಡ್‌ನಲ್ಲಿ ವಾಸವಾಗಿದ್ದಳು. ಈ ವೇಳೆ, ಇಬ್ಬರು ಕಡೆಯ ಸಂಬಂಧಿಕರು ಮತ್ತು ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹೀಗಾಗಿ ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಇಲಿ ವಿಷ ಸೇವಿಸಿದ್ದರು.