ಚೆನ್ನೈ: ಕೃತಿಸ್ವಾಮ್ಯ ವಿಚಾರದಲ್ಲಿ ಸಂಗೀತ ಸಂಯೋಜಕ ಇಳಯರಾಜ ಪರವಾಗಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ. ಒಪ್ಪಂದದ ಅವಧಿ ಮುಗಿದ ನಂತರ ಪೇಟೆಂಟ್ ಪಡೆಯದೇ ಹಾಡುಗಳನ್ನು ಬಳಸಿದ್ದಕ್ಕಾಗಿ ಎಕೋ ಮತ್ತು ಅಕಿ ಮ್ಯೂಸಿಕ್ ಸೇರಿದಂತೆ ಇತರ ಸಂಗೀತ ಕಂಪನಿಗಳ ವಿರುದ್ಧ ಸಂಗೀತ ಸಂಯೋಜಕ ಇಳಯರಾಜ ಅವರು ಚೆನ್ನೈ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಹಿಂದೆ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ಇಕೋ ಸೇರಿದಂತೆ ಮ್ಯೂಸಿಕ್ ಕಂಪನಿಗಳಿಗೆ ಇಳಯರಾಜ ಅವರ ಹಾಡುಗಳನ್ನು ಬಳಸಿಕೊಳ್ಳುವ ಹಕ್ಕು ಇದೆ ಎಂದು ಆದೇಶ ನೀಡಿತ್ತು. ತೀರ್ಪಿನ ವಿರುದ್ಧ ಇಳಯರಾಜ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಪ್ರಕರಣದಲ್ಲಿ ಇಳಯರಾಜ ಪರ ವಕೀಲರು ವಾದ ಮಾಡಿ, ಒಪ್ಪಂದದ ಅವಧಿ ಮುಗಿದ ನಂತರವೂ ಇಳಯರಾಜ ಅವರ ಹಾಡುಗಳನ್ನು ಬಳಸಲಾಗುತ್ತಿದೆ ಮತ್ತು ಪೇಟೆಂಟ್ ಪಡೆದಿಲ್ಲ ಎಂದು ವಾದಿಸಿದ್ದರು.