ಕರ್ನಾಟಕ

karnataka

ETV Bharat / bharat

ಮಾಧ್ಯಮಿಕ್​  ಪರೀಕ್ಷಾರ್ಥಿಗೆ ದಿಢೀರ್​ ಹೆರಿಗೆ ನೋವು.. ಹಸುಳೆಗಳೊಂದಿಗೆ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿನಿಯರು! - ಬಾಲಕಿ ಆಸ್ಪತ್ರೆಯಲ್ಲೇ ಪರೀಕ್ಷೆ

ಪಶ್ಚಿಮ ಬಂಗಾಳದಲ್ಲಿ ಮಾಧ್ಯಮಿಕ್​ ಪರೀಕ್ಷೆ 2023 ಆರಂಭವಾಗಿವೆ. ಇಬ್ಬರು ವಿದ್ಯಾರ್ಥಿನಿಯರು ತಾವು ಹೆತ್ತ ಹಸುಳೆಗಳನ್ನು ಕಂಕುಳಲ್ಲೇ ಇಟ್ಟುಕೊಂಡು ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದರೆ, ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆ ಸಮಯದಲ್ಲೇ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿತ್ತು.

Madhyamik examinee gives birth to child during exam in Bengal's Malda
ಮಾಧ್ಯಮಿಕ್​ ಪರೀಕ್ಷಾರ್ಥಿಗೆ ದಿಢೀರ್​ ಹೆರಿಗೆ ನೋವು.. ಹಸುಳೆಗಳೊಂದಿಗೆ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿನಿಯರು!

By

Published : Feb 24, 2023, 6:45 AM IST

ಮಾಲ್ಡಾ( ಪಶ್ಚಿಮ ಬಂಗಾಳ): ಮಾಧ್ಯಮಿಕ ಶಾಲೆಯ ಹದಿನಾರುವರೆ ವರ್ಷದ 6 ತಿಂಗಳು ವಿದ್ಯಾರ್ಥಿನಿಯೊಬ್ಬರಿಗೆ ಸೆಕೆಂಡರಿ ಪರೀಕ್ಷೆ ವೇಳೆ ಹೆರಿಗೆಯಾದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಅಷ್ಟೇ ಅಲ್ಲ ಇಬ್ಬರು ವಿದ್ಯಾರ್ಥಿನಿಯರು ಮಾಲ್ಡಾ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪರೀಕ್ಷೆಗೆ ತಮ್ಮ ಶಿಶುಗಳೊಂದಿಗೆ ಹಾಜರಾಗಿ ಗಮನ ಸೆಳೆದಿದ್ದಾರೆ.

ಮಾಧ್ಯಮಿಕ್​ ಪರೀಕ್ಷಾರ್ಥಿಗೆ ದಿಢೀರ್​ ಹೆರಿಗೆ ನೋವು.. ಹಸುಳೆಗಳೊಂದಿಗೆ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿನಿಯರು!

ಪಶ್ಚಿಮ ಬಂಗಾಳದಲ್ಲಿ ಮಾಧ್ಯಮಿಕ್​ ಪರೀಕ್ಷೆ 2023 ಗುರುವಾರದಿಂದ ಪ್ರಾರಂಭವಾಗಿದೆ. ಮಧ್ಯಾಹ್ನ ಪರೀಕ್ಷೆ ಆರಂಭವಾದ ಸುಮಾರು ಒಂದು ಗಂಟೆಯ ನಂತರ ಜಹುರತ್ಲಾ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಪರೀಕ್ಷಕರು ಕೂಡಲೇ ಜಿಲ್ಲಾಡಳಿತದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅಭ್ಯರ್ಥಿಯನ್ನು ಆಂಬ್ಯುಲೆನ್ಸ್‌ನಲ್ಲಿ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ಮಧ್ಯಾಹ್ನ 2:50ಕ್ಕೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾರೆ.

ಮತ್ತೊಂದೆಡೆ, ವೈಷ್ಣಬಗೋನಾರ್‌ನ ಭಗವಾನ್‌ಪುರ ಎಬಿಎಸ್ ಪ್ರೌಢಶಾಲೆಯ ಮತ್ತೊಬ್ಬ ಪರೀಕ್ಷಾರ್ಥಿ ಕಳೆದ ಶನಿವಾರ ಹೆರಿಗೆ ನೋವಿನಿಂದ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಬಾಲಕಿ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾಳೆ. ಅಲ್ಲದೇ, ರಟುವಾದಿಂದ ಮತ್ತೊಬ್ಬ 16 ವರ್ಷದ ಅಭ್ಯರ್ಥಿಯು ಮಾಲ್ಡಾ ಮೆಡಿಕಲ್‌ನ ತಾಯಿಯ ವಿಭಾಗದಲ್ಲಿ ತನ್ನ ಕಂಕುಳಲ್ಲಿ ಮಗುವನ್ನು ಇಟ್ಟುಕೊಂಡು ಪರೀಕ್ಷೆ ಎದುರಿಸಿದ್ದಾಳೆ.

ಇದನ್ನು ಓದಿ:'ಡಿಶ್‌ವಾಶರ್' ಕಸ್ಟಮರ್ ಕೇರ್​ ನಂಬರ್​ ಹುಡುಕಲು ಹೋಗಿ ₹8 ಲಕ್ಷ ಕಳೆದುಕೊಂಡ ವೃದ್ಧ ದಂಪತಿ!

ಆಸ್ಪತ್ರೆ ಮೂಲಗಳ ಪ್ರಕಾರ ವಿದ್ಯಾರ್ಥಿನಿ ಒಂದೂವರೆ ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ದೈಹಿಕ ಸಮಸ್ಯೆಯಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಕಾರಣದಿಂದ ಆಸ್ಪತ್ರೆಯಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಸಿಂಘಾನಿಯಾ, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಬೈಭವ್ ಚೌಧರಿ ಮತ್ತು ಶಂಪಾ ಹಜ್ರಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬು ಬಕ್ಕರ್, ಶಿಕ್ಷಣ ಇಲಾಖೆ ಅಧಿಕಾರಿ ಸೌಮ್ಯ ಘೋಷ್ ಇತರರು, ಸೆಕೆಂಡರಿ ಎಕ್ಸಾಂನ ನಿರ್ವಹಣೆಯನ್ನು ಪರಿಶೀಲಿಸಿದರು. ಪರೀಕ್ಷಾರ್ಥಿಗೆ ಹೆರಿಗೆ ನೋವಿನ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಜಹುರತ್ಲಾ ಪ್ರೌಢಶಾಲೆಗೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲಾ ಸ್ಥಳಗಳಲ್ಲಿ ಪರೀಕ್ಷೆಗಳು ಉತ್ತಮವಾಗಿ ನಡೆಯುತ್ತಿವೆ. ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗಿಲ್ಲ, ಇಬ್ಬರು ಅಭ್ಯರ್ಥಿಗಳು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಅವರ ಪರೀಕ್ಷೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯ ಸಮಯದಲ್ಲಿ ಒಬ್ಬ ಅಭ್ಯರ್ಥಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ವಿದ್ಯಾರ್ಥಿನಿಯನ್ನ ಮಾಲ್ಡಾ ಮೆಡಿಕಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:10ನೇ ತರಗತಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಆನೆ ದಾಳಿಗೆ ಬಲಿ

ABOUT THE AUTHOR

...view details