ಕರ್ನಾಟಕ

karnataka

ETV Bharat / bharat

ಮಹಿಳಾ ಕಾನ್ಸ್​ಟೇಬಲ್​ ​'ಪುರುಷ'ನಾಗಿ ಬದಲಾಗಲು ಅನುಮತಿ ನೀಡಿದ ರಾಜ್ಯ ಸರ್ಕಾರ

ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ ಒಬ್ಬರು ಪುರುಷನಾಗಿ ಬದಲಾವಣೆಯಾಗಲು ನಿರ್ಧರಿಸಿದ್ದು, ಇದಕ್ಕೆ ಮಧ್ಯಪ್ರದೇಶ ರಾಜ್ಯ ಸರ್ಕಾರ ಕೂಡ ಅನುಮತಿ ನೀಡಿದೆ.

MP women constable
MP women constable

By

Published : Dec 1, 2021, 7:37 PM IST

ಭೋಪಾಲ್​​(ಮಧ್ಯಪ್ರದೇಶ): ಮಧ್ಯಪ್ರದೇಶ ಸರ್ಕಾರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಮಹಿಳಾ ಕಾನ್​​ಸ್ಟೇಬಲ್​​ ಒಬ್ಬರು ಪುರುಷನಾಗಿ ಬದಲಾಗಲು ಅನುಮತಿ ನೀಡಲಾಗಿದೆ. ಅಲ್ಲಿನ ಗೃಹ ಇಲಾಖೆ ಇದಕ್ಕೆ ಅನುಮತಿ ನೀಡಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್​ ರಾಜೋರಾ ತಿಳಿಸಿದ್ದಾರೆ.

ಮಧ್ಯಪ್ರದೇಶ ಸರ್ಕಾರದ ಗೃಹ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪುರುಷನಾಗಿ ಬದಲಾಗಲು ಅನುಮತಿ ನೀಡಿರುವ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿರುವ ಅವರು, ಡಿಸೆಂಬರ್​​ 1ರಂದು ಅನುಮತಿ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ:ರೈತರ ಸಾವಿನ ಲೆಕ್ಕವಿಲ್ಲ ಎಂದ ಕೇಂದ್ರ..ಇದು 'ರೈತರಿಗೆ ಮಾಡಿರುವ ಅವಮಾನ' ಎಂದ ಖರ್ಗೆ

ಲಿಂಗ ಬದಲಾವಣೆಗೆ ಸಂಬಂಧಿಸಿದಂತೆ 2019ರಲ್ಲಿ ಮಹಿಳಾ ಕಾನ್ಸ್​​ಟೇಬಲ್​​​ ​​​​ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಪೊಲೀಸ್ ಇಲಾಖೆ ಈ ಅರ್ಜಿಯನ್ನ ರಾಜ್ಯ ಗೃಹ ಇಲಾಖೆಗೆ ರವಾನೆ ಮಾಡಿತ್ತು. ಅದರ ಪರಿಶೀಲನೆ ನಡೆಸಿರುವ ಕೇಂದ್ರ ಇದೀಗ ಅನುಮತಿ ನೀಡಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮಹಿಳೆ ಚಿಕ್ಕವಳಾಗಿದ್ದಾಗಿನಿಂದಲೂ ಲಿಂಗ ಗುರುತಿಸುವಿಕೆ ಸಮಸ್ಯೆ ಎದುರಿಸುತ್ತಿದ್ದರಂತೆ. ಅದೇ ಕಾರಣಕ್ಕಾಗಿ ಲಿಂಗ ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ.

ಪರುಷನಾಗಿ ಬದಲಾದ ನಂತರ ಪುರುಷ ಕಾನ್ಸ್​ಟೇಬಲ್​​​​ಗಳಂತೆ ಕೆಲಸ ಮಾಡಬಹುದಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details