ಭೋಪಾಲ್(ಮಧ್ಯಪ್ರದೇಶ): ಗೃಹರಕ್ಷಕ ದಳದ ಮಹಿಳಾ ಕಾನ್ಸ್ಟೇಬಲ್ವೋರ್ವರು ವ್ಯಕ್ತಿಯಿಂದ ತನ್ನ ಪ್ಯಾಂಟ್ ಸ್ವಚ್ಛಗೊಳಿಸಿ, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗ್ತಿದೆ.
ವಿವರ:
ವ್ಯಕ್ತಿಯೊಬ್ಬ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದ. ಈ ವೇಳೆ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಫ್ಯಾಂಟ್ಗೆ ಕೆಸರು ಹತ್ತಿದೆ. ಇದನ್ನು ಗಮನಿಸಿ ಆಕೆ ತಕ್ಷಣ ಯುವಕನನ್ನು ತನ್ನ ಬಳಿಗೆ ಕರೆದು ಪ್ಯಾಂಟ್ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿ ವಸ್ತ್ರದಿಂದ ಪ್ಯಾಂಟ್ ಸ್ವಚ್ಛಗೊಳಿಸುತ್ತಿರುವುದು ಕಂಡುಬರುತ್ತದೆ. ಪ್ಯಾಂಟ್ ಸ್ವಚ್ಛಗೊಳಿಸಿದ ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಆ ಯುವಕನಿಗೆ ಕಪಾಳಮೋಕ್ಷ ಮಾಡಿ, ಸ್ಥಳದಿಂದ ಹೊರಟು ಹೋಗಿದ್ದಾರೆ.