ಸಾಗರ್: ಮಧ್ಯಪ್ರದೇಶದ ಹಿರಿಯ ಸಚಿವ ಗೋಪಾಲ್ ಭಾರ್ಗವ ಅವರು 22 ವರ್ಷಗಳ ಹಿಂದೆ ಆರಂಭಿಸಿದ್ದ ಬಡ ಕುಟುಂಬದ ಹೆಣ್ಣುಮಕ್ಕಳನ್ನು ದತ್ತು ಪಡೆದು ಕನ್ಯಾದಾನ ಮಾಡುವ ಮಹಾನ್ ಸಂಕಲ್ಪವನ್ನು 21 ಸಾವಿರ ಹುಡುಗಿಯರಿಗೆ ಮದುವೆ ಮಾಡಿಸುವ ಮೂಲಕ ಈಡೇರಿಸಿದ್ದಾರೆ.
ಈ ಬಾರಿಯೂ 20ನೇ ಸಾಮೂಹಿಕ ವಿವಾಹ ಅಚ್ಚುಕಟ್ಟಾಗಿ ನೆರವೇರಿಸಿದ್ದು, ಒಂದೇ ಮಂಟಪದಲ್ಲಿ 2100 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮಹಾ ಸಂಕಲ್ಪದ ಪೂರ್ಣಾಹುತಿ ದಿನಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತು ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿಧಿ ಶರ್ಮಾ ಸೇರಿದಂತೆ ಇತರೆ ಮುಖಂಡರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಮಾತನಾಡಿ, ಸಚಿವ ಗೋಪಾಲ್ ಭಾರ್ಗವ ಅವರು ರಾಜಕಾರಣಿ ಅಷ್ಟೇ ಅಲ್ಲ, ಸಮಾಜ ಸೇವೆಗೆ ತಾಜಾ ಉದಾಹರಣೆ ಎಂದು ಬಣ್ಣಿಸಿದರು. ಬಡ ಕುಟುಂಬದ ಹೆಣ್ಣುಮಕ್ಕಳನ್ನು ದತ್ತು ಪಡೆದು ಕನ್ಯಾದಾನ ಮಾಡುವ ಮಹಾನ್ ಸಂಕಲ್ಪವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಚಿವ ಗೋಪಾಲ್ ಭಾರ್ಗವ ಅವರ ಪುತ್ರ ಅಭಿಷೇಕ್ ಭಾರ್ಗವ ಅವರು ತಂದೆಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದು, ವಜ್ರ ಎಂದು ಬಣ್ಣಿಸಿ, ಅವರು ಸಹ ಬಡ ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ ಎಂದು ಪ್ರಶಂಸಿಸಿದರು.
ಗೋಪಾಲ ಭಾರ್ಗವ ಕೇವಲ ರಾಜಕಾರಣಿಯಲ್ಲ. ಅವರೊಬ್ಬ ಸಮಾಜ ಸೇವಕ ಹಾಗೂ ಅಭಿವೃದ್ಧಿ ಪುರುಷ. ಅವರು ಯಾವಾಗಲೂ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. 21 ಸಾವಿರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ರಚಿಸಿದ ಸಮಾಜ ಸೇವೆಯ ಇತಿಹಾಸ ಅನುಕರಣೀಯ. ಈ ಬಾರಿಯೂ ಅದ್ಧೂರಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿ 2100 ಹುಡುಗಿಯರ ಮದುವೆಯನ್ನು ನೆರವೇರಿಸಿದರು ಎಂದು ಶ್ಲಾಘಿಸಿದರು.