ಗ್ವಾಲಿಯರ್ (ಮಧ್ಯಪ್ರದೇಶ):ಇಲ್ಲಿನ ಮೋತಿಜಿಲ್ನಲ್ಲಿನ ವಿದ್ಯುತ್ ಕೇಂದ್ರ ತಪಾಸಣೆಗೆ ಆಗಮಿಸಿದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ವತಃ ತಾವೇ ಟ್ರಾನ್ಸ್ಫಾರ್ಮರ್ ಏರಿ ಸ್ವಚ್ಛಗೊಳಿಸಿದ್ದಾರೆ. ನಗರದಲ್ಲಿ ಪ್ರತಿ ದಿನ ವಿದ್ಯುತ್ ಕಡಿತವಾಗುತ್ತಿದ್ದ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆ ತಪಾಸಣೆಗೆ ಆಗಮಿಸಿದ್ದರು.
ಈ ವೇಳೆ ಟ್ರಾನ್ಸ್ಫಾರ್ಮರ್ ಬಳಿ ಗಿಡವೊಂದು ಬೆಳೆದಿತ್ತು. ಇದರಿಂದ ಟ್ರಾನ್ಸ್ಫಾರ್ಮರ್ ಮೇಲೆ ಕಸಕಡ್ಡಿ ಬಿದ್ದಿದ್ದವು. ಇದನ್ನು ಕಂಡ ಸಚಿವರು ತಕ್ಷಣವೇ ಏಣಿ ತರಿಸಿ ತಾವೇ ಟ್ರಾನ್ಸ್ಫಾರ್ಮರ್ ಶುಚಿಗೊಳಿಸಿದ್ದಾರೆ.