ಕರ್ನಾಟಕ

karnataka

ETV Bharat / bharat

ಸಮೋಸಾ ಬೆಲೆ ಹೆಚ್ಚಳಕ್ಕೆ ಆರಂಭವಾದ ವಾಗ್ವಾದ ಆತ್ಮಹತ್ಯೆಯಲ್ಲಿ ಅಂತ್ಯ - ಸಮೋಸಾ ಬೆಲೆ ಹೆಚ್ಚಳಕ್ಕೆ ಆರಂಭವಾದ ವಾಗ್ವಾದ ಸುದ್ದಿ

ಸಮೋಸಾ ಬೆಲೆ ಹೆಚ್ಚಳದಿಂದ ಉಂಟಾದ ವಾಗ್ವಾದ ತಾರಕಕ್ಕೇರಿದ್ದು, ಜೈಸ್ವಾಲ್​ ಎಂಬ ವ್ಯಕ್ತಿ ತನ್ನ ಮೇಲೆ ತಾನೇ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಬೆಂಕಿ ಆರಿಸಿ, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದ ಜೈಸ್ವಾಲ್​ ಸಾವನ್ನಪ್ಪಿದ್ದಾರೆ.

ಸಮೋಸಾ ಬೆಲೆ ಹೆಚ್ಚಳಕ್ಕೆ ಆರಂಭವಾದ ವಾಗ್ವಾದ ಆತ್ಮಹತ್ಯೆಯಲ್ಲಿ ಅಂತ್ಯ
ಸಮೋಸಾ ಬೆಲೆ ಹೆಚ್ಚಳಕ್ಕೆ ಆರಂಭವಾದ ವಾಗ್ವಾದ ಆತ್ಮಹತ್ಯೆಯಲ್ಲಿ ಅಂತ್ಯ

By

Published : Jul 28, 2021, 7:54 AM IST

ಅನ್ನೂಪುರ (ಮಧ್ಯಪ್ರದೇಶ):ಸಮೋಸಾ ಬೆಲೆ ಹೆಚ್ಚಳದಿಂದ ಉಂಟಾದ ವಾಗ್ವಾದ ತಾರಕಕ್ಕೇರಿದ್ದು, ಓರ್ವ ವ್ಯಕ್ತಿ ಬೆಂಕಿ ಹಚ್ಚಿಕೊಂಡ ಘಟನೆ ಮಧ್ಯಪ್ರದೇಶದ ಅನ್ನೂಪುರದಲ್ಲಿ ನಡೆದಿದೆ. ಜುಲೈ 22 ರಂದು ಅಮರ್‌ಕಾಂತಕ್‌ನ ಅಂಗಡಿಯೊಂದರಲ್ಲಿ ಮೂವರು ಸ್ನೇಹಿತರು ಸಮೋಸಾ ತಿನ್ನಲು ಬಂದಾಗ, ಅಂಗಡಿಯವನು ಬೆಲೆಯನ್ನು ಹೆಚ್ಚಿಸಲಾಗಿರುವುದಅಗಿ ತಿಳಿಸಿದ್ದಾರೆ.

ಎರಡು ಸಮೋಸಾಗಳ ಬೆಲೆಯನ್ನು 15 ರಿಂದ 20 ರೂ.ಗೆ ಏರಿಸಲಾಗಿದೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಗ್ರಾಹಕರು ಮತ್ತು ಅಂಗಡಿ ಮಾಲೀಕನ ಮಧ್ಯೆ ವಾಗ್ವಾದ ಆರಂಭವಾಗಿದೆ.

ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಆಶಿಶ್ ಭಾರಂಡೆ ಅವರ ಪ್ರಕಾರ, ವಾದವು ಉಲ್ಬಣಗೊಂಡಿದ್ದರಿಂದ ಅಂಗಡಿಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಚಾಲನೆ ನೀಡಿದರು. ನಂತರ ತನಿಖೆಯ ಭಾಗವಾಗಿ ಜೈಸ್ವಾಲ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಮರುದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಜೈಸ್ವಾಲ್ ಮತ್ತೆ ಅಂಗಡಿಗೆ ಬಂದರು. ಆಗ ಮತ್ತೊಂದು ಬಾರಿ ಇಬ್ಬರ ನಡುವೆ ಜಗಳವಾಗಿದೆ. ಆಗ ಜೈಸ್ವಾಲ್​ ತನ್ನ ಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಬೆಂಕಿ ಆರಿಸಿ, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದ ಜೈಸ್ವಾಲ್​ ಸಾವನ್ನಪ್ಪಿದ್ದಾರೆ.

"ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಬಜ್ರು ಜೈಸ್ವಾಲ್ ತನ್ನ ಮೇಲೆ ಪೆಟ್ರೋಲ್ ಸುರಿದು ತನ್ನನ್ನು ತಾನೇ ಬೆಂಕಿಗೆ ಆಹುತಿ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ನಿಧನರಾದರು" ಎಂದು ಎಸ್​ಡಿಪಿಒ ಭರಾಂಡೆ ಹೇಳಿದ್ದಾರೆ.

ಜೈಸ್ವಾಲ್ ಅವರ ಸಂಬಂಧಿಕರು ಘಟನೆಯ ವಿಡಿಯೋವೊಂದನ್ನು ಮಾಡಿದ್ದಾರೆ ಮತ್ತು ಜೈಸ್ವಾಲ್ ಅವರು ಪೊಲೀಸರು ಮತ್ತು ದೂರುದಾರರಿಂದ ಕಿರುಕುಳಕ್ಕೊಳಗಾಗಿದ್ದರಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಎಲ್ಲರಿಗೂ ಮೊದಲೇ ಬೇಸರ ಮಾಡ್ಕೊಂಡು ಹೋಟೆಲ್‌ನಿಂದ ಹೊರ ನಡೆದ ಯತ್ನಾಳ್.. ಮತ್ತೆ ಬಂಡೇಳುವರೇ..?

ABOUT THE AUTHOR

...view details