ಕರ್ನಾಟಕ

karnataka

ETV Bharat / bharat

ಭೋಪಾಲ್‌: ಜಮೀನಿನಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಸೇನಾ ಸಿಬ್ಬಂದಿ ಸುರಕ್ಷಿತ - ಭಾರತೀಯ ವಾಯುಪಡೆಯ 6 ಸೇನಾ ಸಿಬ್ಬಂದಿ

ಭಾರತೀಯ ವಾಯುಪಡೆಯ (ಐಎಎಫ್) ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ನಲ್ಲಿ​ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಭೋಪಾಲ್‌ನ ಬೆರಾಸಿಯಾದ ಡುಂಗರಿಯಾ ಅಣೆಕಟ್ಟೆಯ ಸಮೀಪದ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿತು.

IAF aircraft makes emergency landing in Bhopal
ಭೋಪಾಲ್ ಬಳಿ ಜಮೀನಿನಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

By ETV Bharat Karnataka Team

Published : Oct 1, 2023, 6:13 PM IST

ಭೋಪಾಲ್ (ಮಧ್ಯಪ್ರದೇಶ): ರಾಜಧಾನಿ ಭೋಪಾಲ್‌ನ ಬೆರಾಸಿಯಾದ ಡುಂಗರಿಯಾ ಅಣೆಕಟ್ಟೆಯ ಬಳಿ ಇಂದು ಭಾರತೀಯ ವಾಯುಪಡೆಯ (ಐಎಎಫ್) ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 6 ಸೇನಾ ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆನಿಕಾಪ್ಟರ್‌ನಲ್ಲುಂಟಾದ ತಾಂತ್ರಿಕ ದೋಷದ ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ. ಪೈಲಟ್ ಮತ್ತು ಐವರು ಸೇನಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ಥಳದಲ್ಲಿದ್ದ ಬೆರಾಸಿಯಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನರೇಂದ್ರ ಕುಲಾಸ್ತೆ ಹೇಳಿದರು.

ಬೆಳಗ್ಗೆ 8.45ರ ಸುಮಾರಿಗೆ ಘಟನೆ ನಡೆದಿದೆ. ಐಎಎಫ್‌ನ III ಎಚ್‌ಯು ಘಟಕದ ಹೆಲಿಕಾಪ್ಟರ್‌ ಭೋಪಾಲ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಮೀ ದೂರದ ಡುಂಗರಿಯಾ ಗ್ರಾಮದ ಅಣೆಕಟ್ಟೆಯ ಬಳಿಯ ಗದ್ದೆಯಲ್ಲಿ ತುರ್ತು ಭೂ ಸ್ಪರ್ಶಿಸಿದೆ ಎಂದು ಅಧಿಕಾರಿ ತಿಳಿಸಿದರು.

ಭೋಪಾಲ್‌ನಿಂದ ಝಾನ್ಸಿಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ದೋಷ ಸರಿಪಡಿಸಲು ಐಎಎಫ್‌ನ ತಂಡ ಸ್ಥಳಕ್ಕೆ ತಲುಪಿದೆ. ಮತ್ತೊಂದು ತಂತ್ರಜ್ಞರ ತಂಡ ನಾಗ್ಪುರದಿಂದ ಡುಂಗರಿಯಾ ಗ್ರಾಮವನ್ನು ಶೀಘ್ರದಲ್ಲೇ ತಲುಪುವ ನಿರೀಕ್ಷೆಯಿದೆ ಎಂದರು.

ಬಹು ಸುಧಾರಿತ ಲಘು ಹೆಲಿಕಾಪ್ಟರ್: ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ಪ್ರಕಾರ, ಸ್ವದೇಶಿಯಾಗಿ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಅ​ನ್ನು ವಿನ್ಯಾಸಗೊಳಿಸಲಾಗಿದೆ. 5.5 ಟನ್ ತೂಕದ ವರ್ಗದಲ್ಲಿ ಅವಳಿ-ಎಂಜಿನ್, ಬಹು-ಪಾತ್ರ, ಬಹು-ಮಿಷನ್ ಹೊಸ ಪೀಳಿಗೆಯ ಹೆಲಿಕಾಪ್ಟರ್ ಇದಾಗಿದೆ. ಮೂಲ ಹೆಲಿಕಾಪ್ಟರ್ ಅನ್ನು ಸ್ಕಿಡ್ ಆವೃತ್ತಿ ಮತ್ತು ಚಕ್ರದ ಆವೃತ್ತಿಯಲ್ಲಿ ಉತ್ಪಾದಿಸಲಾಗುತ್ತದೆ. ಧ್ರುವ್ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಮಿಲಿಟರಿ ಏರ್‌ವರ್ತಿನೆಸ್ ಸರ್ಟಿಫಿಕೇಶನ್ (CEMILAC) ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನಿಂದ (DGCA) ಸಿವಿಲ್ ಕಾರ್ಯಾಚರಣೆಗಳಿಗಾಗಿ ಟೈಪ್-ಸರ್ಟಿಫೈಡ್ ಪಡೆದುಕೊಂಡಿದೆ.

ಇದನ್ನೂ ಓದಿ:ಜೆಎನ್‌ಯು ಕ್ಯಾಂಪಸ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ: ಮತ್ತೆ ಭುಗಿಲೆದ್ದ ವಿವಾದ

ABOUT THE AUTHOR

...view details