ಕರ್ನಾಟಕ

karnataka

ETV Bharat / bharat

'ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ Sex Racket: ಐವರು ಮಹಿಳೆಯರ ಬಂಧನ - ಸೆಕ್ಸ್​ ರಾಕೆಟ್ ದಂಧೆ

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆಸಲಾಗುತ್ತಿದ್ದ ಸೆಕ್ಸ್​ ರಾಕೆಟ್​ ದಂಧೆ ಮೇಲೆ ಇಲ್ಲಿನ ಪೊಲೀಸರು ದಾಳಿ ನಡೆಸಿದ್ದು, ಐವರು ಮಹಿಳೆಯರ ಬಂಧನ ಮಾಡಿದ್ದಾರೆ.

five workers of a spa
five workers of a spa

By

Published : May 29, 2021, 4:55 AM IST

ಗ್ವಾಲಿಯರ್​(ಮಧ್ಯಪ್ರದೇಶ):ಗ್ವಾಲಿಯರ್​ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೆಕ್ಸ್​​ ರಾಕೆಟ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಕ್ರೈಂ ಬ್ರ್ಯಾಂಚ್​ ಪೊಲೀಸರು ಮಾಲೀಕ ಸೇರಿದಂತೆ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐವರು ಮಹಿಳೆಯರ ಬಂಧನ

'ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಐವರು ಮಹಿಳೆಯರು ಹಾಗೂ ದಂಧೆ ನಡೆಸುತ್ತಿದ್ದ ಮಾಲೀಕನ ಬಂಧನ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಗೋವಿಂದ್​ಪುರ ಇಲಾಖೆಯಲ್ಲಿ ಆರ್ಗ್ಯಾನಿಕ್​ ಬ್ಯೂಟಿ ಎಂಬ ಹೆಸರಿನ ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸುತ್ತಿದ್ದರು. ದಾಳಿ ನಡೆಸಿರುವ ವೇಳೆ 15 ಸಾವಿರ ರೂ. ನಗದು ಹಣ ಸಿಕ್ಕಿದೆ ಎಂದು ಎಎಸ್​​ಪಿ ಹಿತಿಕಾ ವಾಸ್ಲೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ..

ಈ ಹಿಂದೆ ಏಪ್ರಿಲ್​ ತಿಂಗಳಲ್ಲಿ ಗ್ವಾಲಿಯರ್​ನ ವಿಶ್ವವಿದ್ಯಾಲಯ ಪ್ರದೇಶದಲ್ಲಿ ದಾಳಿ ನಡೆಸಿ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಂಧಿತ ಹುಡುಗಿಯರು ದೆಹಲಿ ಹಾಗೂ ಕೋಲ್ಕತ್ತಾ ಮೂಲದವರು ಎನ್ನಲಾಗಿದೆ.

ABOUT THE AUTHOR

...view details