ಧಾರ್(ಮಧ್ಯಪ್ರದೇಶ):ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಸಾಮಾನ್ಯವಾಗಿ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರು ಹಾಕುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಅಂತ್ಯಸಂಸ್ಕಾರ ಕಾರ್ಯ ವಿಭಿನ್ನವಾಗಿದೆ. ಹೀಗೂ ಅಂತ್ಯಕ್ರಿಯೆ ಮಾಡುವುದುಂಟಾ ಎಂದು ನಿಮಗೆ ಅಚ್ಚರಿ ಆಗುತ್ತೆ.
ದೇವಿಪುರದ ಭುವವಾಡ ಗ್ರಾಮದ 100 ವರ್ಷದ ಜಮ್ ಸಿಂಗ್ ಸಾವನ್ನಪ್ಪಿದ್ದು, ಈ ವೇಳೆ ಕುಟುಂಬಸ್ಥರು, ಗ್ರಾಮಸ್ಥರು ಅದ್ಧೂರಿಯಾಗಿ ಆತನ ಅಂತ್ಯಕ್ರಿಯೆ ನಡೆಸಿದ್ದಾರೆ. ಹಾಡುತ್ತಾ, ಕುಣಿಯುತ್ತ, ಮೃತದೇಹದ ಮೆರವಣಿಗೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.