ಭೋಪಾಲ್(ಮಧ್ಯಪ್ರದೇಶ):ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಬ್ಬರ ಜೋರಾಗಿದ್ದು, ನಿತ್ಯ ಸಾವಿರಾರು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಅವರ ಅಂತ್ಯಕ್ರಿಯೆ ನಡೆಸಲು ಇದೀಗ ತೊಂದರೆ ಎದುರಾಗಿದ್ದು, ವಿವಿಧ ಶವಾಗಾರಗಳಲ್ಲಿ ರಾಶಿ ರಾಶಿ ಶವಗಳು ಕಂಡು ಬರುತ್ತಿವೆ.
ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ಕೋವಿಡ್ ಅಬ್ಬರ ಜೋರಾಗಿದ್ದು, ನಿತ್ಯ ನೂರಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಲು ವಿವಿಧ ಶವಗಾರಗಳಲ್ಲಿ ಜಾಗವಿಲ್ಲದೇ ಹತ್ತಾರು ಗಂಟೆ ಕಾಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್ ಮಾಡಿದ್ದು, ವಿವಿಧ ಶವಗಾರಗಳಲ್ಲಿ ರಾಶಿ ರಾಶಿ ಶವ ಕಂಡು ಬಂದಿದ್ದು, ಅವುಗಳ ಅಂತ್ಯಕ್ರಿಯೆ ನಡೆಸಲು ಅನೇಕ ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.