ಮಾಂಡ್ಲಾ(ಮಧ್ಯಪ್ರದೇಶ):ಬುಡಕಟ್ಟು ಸಮುದಾಯಗಳಿಗಾಗಿ ಆಚರಣೆ ಮಾಡುವ ಜಂಜಾಟಿಯಾ ಗೌರವ್ ದಿವಸ್ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಬುಡಕಟ್ಟು ಜನರೊಂದಿಗೆ ಡೋಲು ಬಾರಿಸಿ, ನೃತ್ಯ ಮಾಡಿದರು.
ನವೆಂಬರ್ 15ರಂದು ಆರಂಭವಾಗಿರುವ ಜಂಜಾಟಿಯಾ ಗೌರವ್ ದಿವಸ್ ಒಂದು ವಾರದವರೆಗೆ ಮುಂದುವರೆದಿದ್ದು, ಮಧ್ಯಪ್ರದೇಶದ ಬುಡಕಟ್ಟು ನಾಯಕನಾಗಿದ್ದ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಸ್ಮರಣೆಯನ್ನೂ ಈ ದಿನದಂದು ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಆಚರಣೆ ಮಾಡಲಾಗಿತ್ತು.