ಕರ್ನಾಟಕ

karnataka

ETV Bharat / bharat

ಧಾರ್ಮಿಕ ಸ್ಥಳದಲ್ಲಿ ಧ್ವನಿ ವರ್ಧಕ, ತೆರೆದ ಜಾಗದಲ್ಲಿ ಮಾಂಸ ಮಾರಾಟಕ್ಕೆ ನಿಷೇಧ: ಮಧ್ಯ ಪ್ರದೇಶ ಸಿಎಂ ಮೊದಲ ನಿರ್ಧಾರ - ಮೊದಲ ಸಚಿವ ಸಂಪುಟ

ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಡಿದ ಮೊದಲ ಸಚಿವ ಸಂಪುಟದಲ್ಲಿ ಈ ಎರಡು ನಿರ್ಧಾರಗಳನ್ನು ಸಿಎಂ ಪ್ರಕಟಿಸಿದ್ದಾರೆ.

Madhya Pradesh CM Mohan Yadav starts with ban on meat sales in open, loudspeakers in religious places
Madhya Pradesh CM Mohan Yadav starts with ban on meat sales in open, loudspeakers in religious places

By ETV Bharat Karnataka Team

Published : Dec 14, 2023, 4:43 PM IST

Updated : Dec 14, 2023, 5:13 PM IST

ಭೋಪಾಲ್​: ಎಲ್ಲ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳದಲ್ಲಿ ರಾಜ್ಯದಲ್ಲಿ ಅನುಮೋದಿಸಲಾದ ಮಟ್ಟಕ್ಕಿಂತ ಹೆಚ್ಚಿನ ಧ್ವನಿವರ್ಧಕ ಬಳಕೆ ಮಾಡುವುದನ್ನು ನಿರ್ಬಂಧಿಸಿ ಮಧ್ಯ ಪ್ರದೇಶದ ನೂತನ ಸಿಎಂ ಮೋಹನ್​ ಯಾದವ್​​ ಆದೇಶ ಹೊರಡಿಸಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರ್​ ಬಳಿಕ ಈ ಆದೇಶ ಹೊರಡಿಸಿದ್ದರು. ಇದರ ಜೊತೆಗೆ ರಾಜ್ಯದಲ್ಲಿ ತೆರೆದ ಸ್ಥಳದಲ್ಲಿ ಮಾಂಸ ಮತ್ತು ಮೊಟ್ಟೆಯ ಮಾರಾಟಕ್ಕೆ ನಿಯಂತ್ರಣವನ್ನು ಅವರು ಜಾರಿಗೆ ತಂದಿದ್ದಾರೆ.

ಬುಧವಾರ ಪ್ರಮಾಣ ವಚನ ಸ್ವೀಕಾರದ ಬಳಿಕ ಮಾಡಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಎರಡು ವಿಚಾರಗಳ ಕುರಿತು ನಿರ್ಧಾರವನ್ನು ಸಿಎಂ ಪ್ರಕಟಿಸಿದ್ದಾರೆ. ಆರ್​ಎಸ್​ಎಸ್​ ಹಿನ್ನೆಲೆ ಹೊಂದಿರುವ ಅವರು, ಆಹಾರ ನಿಯಮ ಸಂಬಂಧಿತ ಮಾರ್ಗಸೂಚಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆಹಾರ ಸುರಕ್ಷಣೆ ಮತ್ತು ಸಂಬಂಧಿ ಮಾರ್ಗಸೂಚಿಯಡಿ ತೆರೆದ ಸ್ಥಳದಲ್ಲಿ ಮಾಂಸ ಮತ್ತು ಮೊಟ್ಟೆ ಮಾರಾಟದ ನಿರ್ಧಾರವನ್ನು ಮಾಡಲಾಗಿದೆ. ಇದಕ್ಕೆ ಅಗತ್ಯವಾದ ಸಾರ್ವಜನಿಕ ಜಾಗೃತಿ ಮಾಪನವನ್ನು ಪಡೆಯಲಾಗುವುದು ಎಂದಿದ್ದಾರೆ.

ಡಿಸೆಂಬರ್​ 15ರಿಂದ 31ರವರೆಗೆ ತೆರೆದ ಸ್ಥಳದಲ್ಲಿ ಮಾಂಸ ಮತ್ತು ಮೀನು ಮಾರಾಟ ನಿಷೇದ ಜಾರಿಗೆ ಪೊಲೀಸ್​ ಮತ್ತು ನಗರ ಸಂಸ್ಥೆಗಳು, ಆಹಾರ ಇಲಾಖೆ ಕಾರ್ಯ ನಿರ್ವಹಿಸಲಿದೆ. ಸುಪ್ರೀಂ ಕೋರ್ಟ್​​ ಮಾರ್ಗಸೂಚನೆ ಅನುಸಾರವಾಗಿ ಧ್ವನಿವರ್ಧಕಗಳ ನಿಷೇಧಕ್ಕೆ ಕ್ರಮ ನಡೆಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಇನ್ನು ಈ ನಿಯಮಗಳ ಉಲ್ಲಂಘನೆ ಪ್ರಯತ್ನಗಳ ಮೇಲ್ವಿಚಾರಣೆ ನಡೆಸಲು ಎಲ್ಲ ಜಿಲ್ಲೆಗಳಲ್ಲಿ ಫ್ಲೈಯಿಂಗ್​ ಸ್ಕ್ವಾಡ್​ ನಿಯೋಜಿಸಲಾಗಿದ್ದು, ಇವರು ಈ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಯಾರಾದರೂ ಧ್ವನಿವರ್ಧಕಗಳನ್ನು ಅನುಮತಿ ಇಲ್ಲದೇ ಅಥವಾ ನಿಯಮ ಉಲ್ಲಂಘಟನೆ ಮಾಡಿ ಬಳಕೆ ಮಾಡುತ್ತಿದ್ದರೆ, ಈ ಸಂಬಂಧ ಮೂರು ದಿನದಲ್ಲಿ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ.

ರಾಜ್ಯ ಸರ್ಕಾರವೂ ಇದನ್ನು ಮಧ್ಯ ಪ್ರದೇಶ ಶಬ್ಧ ನಿಯಂತ್ರಣ ಕಾಯ್ದೆ, ಧಾರ್ಮಿಕ ಮತ್ತು ಮಧ್ಯಪ್ರದೇಶದಲ್ಲಿ ಇತರ ಸ್ಥಳದಲ್ಲಿನ ಶಬ್ಧ ಮಾಲಿನ್ಯ (ನಿಯಮ ಮತ್ತು ನಿಯಂತ್ರಣ) ನಿಯಮ 2000 ಅನುಸಾರ ಈ ನಿರ್ಧಾರ ನಡೆಸಲಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್​ ಮತ್ತು ಹೈಕೋರ್ಟ್​​ ಕಾಲ ಕಾಲಕ್ಕೆ ನೀಡಿರುವ ಮಾರ್ಗಸೂಚಿಗಳ ಪಾಲನೆ ನಡೆಸಲಾಗಿದೆ. ಈ ನಿಯಮದ ಅನುಸಾರ ಮಿತಿ ಮೀರಿದ ಶಬ್ದಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡು ಮುಖ್ಯಮಂತ್ರಿ vs ಗವರ್ನರ್​ : ರಾಷ್ಟ್ರಪತಿ ವಿರುದ್ಧ ತಡೆಯಾಜ್ಞೆ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್​

Last Updated : Dec 14, 2023, 5:13 PM IST

ABOUT THE AUTHOR

...view details