ಕರ್ನಾಟಕ

karnataka

ETV Bharat / bharat

ನೋಡಲು ಥೇಟ್‌ ದೆಹಲಿ ಸಿಎಂ ಕೇಜ್ರಿವಾಲ್ ರೀತಿ ಕಾಣುವ ಚಾಟ್‌ ಮಾರಾಟಗಾರ! - ಫುಡ್ ಬ್ಲಾಗರ್ ಕರಣ್ ದುವಾ

ಯೂಟ್ಯೂಬ್ ಚಾನೆಲ್ ಹೊಂದಿರುವ ಫುಡ್ ಬ್ಲಾಗರ್ ಓರ್ವ ಕುತೂಹಲಕಾರಿ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಥೇಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರಂತೆ ಕಾಣಿಸುತ್ತಾರೆ.

Madhya Pradesh chaat  seller resembles Delhi CM Arvind Kejriwal
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರನ್ನು ಹೋಲುತ್ತಿದ್ದಾನೆ ಗ್ವಾಲಿಯರ್​ನ ಚಾಟ್​ ಮಾರಾಟಗಾರ

By

Published : Oct 15, 2021, 9:40 AM IST

Updated : Oct 15, 2021, 9:48 AM IST

ಗ್ವಾಲಿಯಾರ್(ಮಧ್ಯಪ್ರದೇಶ):ಒಬ್ಬರನ್ನು ಹೋಲುವಂತೆ ಮತ್ತೊಬ್ಬರು ಇರುವುದು ಅಪರೂಪವೇನಲ್ಲ. ಪ್ರಧಾನಿ ಮೋದಿಯನ್ನು ಹೋಲುವ ವ್ಯಕ್ತಿಯ ಭಾವಚಿತ್ರ ಕೆಲವು ವರ್ಷಗಳ ಹಿಂದೆ ವೈರಲ್ ಆಗಿತ್ತು. ಈಗ ಈ ಸಾಲಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೂ ಸೇರಿಕೊಂಡಿದ್ದಾರೆ.

ಹೌದು, ಮಧ್ಯಪ್ರದೇಶದ ಗ್ವಾಲಿಯಾರ್​ನಲ್ಲಿ ಚಾಟ್ ಮಾರುತ್ತಿರುವ ವ್ಯಕ್ತಿಯೋರ್ವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಂತೆಯೇ ಇದ್ದಾರೆ.

ದಿಲ್​ ಸೆ ಫುಡ್ಡೀ (Dil Se Foodie) ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿರುವ ಫುಡ್ ಬ್ಲಾಗರ್ ಕರಣ್ ದುವಾ, ಈ ವಿಡಿಯೋವನ್ನು ಹಂಚಿಕೊಂಡಿದ್ದು 2 ಲಕ್ಷ ಮಂದಿ ವೀಕ್ಷಿಸಿದ್ದಾರೆ. 9.3 ಲೈಕ್​ಗಳು ಬಂದಿದ್ದು, ನೂರಾರು ಕಮೆಂಟ್​ಗಳೂ ಸಂದಿವೆ.

ಅರವಿಂದ್ ಕೇಜಿವ್ರಾಲ್​ನಂತೆ ಕಾಣುವ ವ್ಯಕ್ತಿ ಗುಪ್ತಾ ಚಾಟ್ ಎಂಬ ಹೆಸರಲ್ಲಿ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಗ್ವಾಲಿಯಾರ್​ನ ಮೋತಿ ಮಹಲ್ ಎದುರಿಗೆ ಇರುವ ಫೂಲ್ ಬಾಘ್​ನಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಇವರು ಚಾಟ್ಸ್​ ಮಾರುತ್ತಾರೆ.

ಇದಕ್ಕೂ ಮೊದಲು ತುಂಬಾ ಮಂದಿ ನನ್ನನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೆಯೇ ಇದ್ದಿಯಾ ಎಂದು ಹೇಳುತ್ತಿದ್ದರು. ಹಿಂದಿನ ವಿಡಿಯೋಗಳಲ್ಲೂ ಕೆಲವರು ಅರವಿಂದ್ ಕೇಜ್ರಿವಾಲ್​ರಂತೆಯೇ ಇರುವುದಾಗಿ ಕಮೆಂಟ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಓರ್ವ ವ್ಯಕ್ತಿ ಕಮೆಂಟ್ ಮಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ವ್ಯಕ್ತಿಯನ್ನು ಒಂದು ಬಾರಿ ಭೇಟಿಯಾಗಬೇಕು ಎಂದಿದ್ದಾನೆ. ಇನ್ನೂ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವ್ಯಕ್ತಿಯೊಬ್ಬರಿಗೆ ಬಂಗಲೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಮಹಾ ಸರ್ಕಾರದ ಸಚಿವರಿಗೆ ಜಾಮೀನು

Last Updated : Oct 15, 2021, 9:48 AM IST

ABOUT THE AUTHOR

...view details