ಬೆಂಗಳೂರು: ‘ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್ 2021’ ಸ್ಪರ್ಧೆ ಇತ್ತೀಚೆಗೆ ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ 16 ವರ್ಷದ ವೇದಾಂತ್ 7 ಪದಕಗಳನ್ನು ತಮ್ಮದಾಗಿಸಿಕೊಂಡು, ಗಮನ ಸೆಳೆದಿದ್ದಾರೆ.
ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 7 ಪದಕ ಗೆದ್ದ ನಟ ಮಾಧವನ್ ಪುತ್ರ ವೇದಾಂತ್! - ಜೂನಿಯರ್ ನ್ಯಾಷನಲ್ ಈಜು ಅಕ್ವಾಟಿಕ್ ಚಾಂಪಿಯನ್‌ಶಿಪ್ 2021
ಬಹುಭಾಷಾ ನಟ ಮಾಧವನ್ ಪುತ್ರ ವೇದಾಂತ್ ಬೆಂಗಳೂರಿನಲ್ಲಿ ನಡೆದ ‘ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್ 2021’ ರಲ್ಲಿ ನಾಲ್ಕು ಬೆಳ್ಳಿ ಹಾಗು ಮೂರು ಕಂಚಿನ ಪದಕಗಳನ್ನು ಗೆದ್ದು ಅಪರೂಪದ ಸಾಧನೆ ತೋರಿದ್ದಾರೆ.
ಸ್ವಿಮ್ಮಿಂಗ್ನಲ್ಲಿ ಬಹುಭಾಷ ನಟ ಮಾಧವನ್ ಮಗ ದಾಖಲೆ
ವೇದಾಂತ್ ಅವರು 800 ಮೀಟರ್ ಫ್ರೀಸ್ಟೈಲ್, 1500 ಮೀ ಫ್ರೀಸ್ಟೈಲ್, 4X100 ಫ್ರೀಸ್ಟೈಲ್ ರಿಲೇ, 4X200 ಫ್ರೀಸ್ಟೈಲ್ ರಿಲೇ ಮತ್ತು 100, 200, 400 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಪಾಲ್ಗೊಂಡು ಈ ಸಾಧನೆ ಮಾಡಿದ್ದಾರೆ.
ಈ ಸ್ಪರ್ಧೆಗಳಲ್ಲಿ ವೇದಾಂತ್ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ್ದರು. ಕಳೆದ ಮಾರ್ಚ್‌ನಲ್ಲಿ ನಡೆದ ಲಾಟ್ವಿಯನ್ ಓಪನ್ ಈಜು ಚಾಂಪಿಯನ್‌ಶಿಪ್‌ನಲ್ಲೂ ಇವರು ಕಂಚಿನ ಪದಕ ಗೆದ್ದಿದ್ದರು.