ಕರ್ನಾಟಕ

karnataka

ETV Bharat / bharat

'India's Space Odyssey'ಗೆ ಧ್ವನಿ ನೀಡಿದ ಮಾಧವನ್​.. ಡಿಸ್ಕವರಿ ಇಂಡಿಯಾಕ್ಕೆ ಧನ್ಯವಾದ ತಿಳಿಸಿದ ನಟ! - ಭಾರತ ಬಾಹ್ಯಾಕಾಶ ಕ್ಷೇತ್ರ

ಮಿಡಿಟೆಕ್​​ ಸ್ಟುಡಿಯೋಸ್​​​ನಿಂದ 'India's Space Odyssey' ಡಾಕ್ಯುಮೆಂಟರಿ ನಿರ್ಮಾಣಗೊಂಡಿದ್ದು, ಇಸ್ರೋದ ವಿಭಿನ್ನ ತಜ್ಞರು, ಬಾಹ್ಯಾಕಾಶ ಇತಿಹಾಸಕಾರರು ಮತ್ತು ಸಂಶೋಧಕರ ಸಾಧನೆ ಇದರಲ್ಲಿದೆ.

Madhavan
Madhavan

By

Published : Oct 6, 2021, 5:38 PM IST

ಮುಂಬೈ:ವಿಜ್ಞಾನ ವಿಷಯಗಳ ಡಾಕ್ಯುಮೆಂಟರಿ 'India's Space Odyssey'ಗಾಗಿ ಬಾಲಿವುಡ್​ ನಟ ಆರ್​​. ಮಾಧವನ್​​ ಧ್ವನಿ ನೀಡಿದ್ದು, ಇದರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಹೆಜ್ಜೆ ಹಾಗೂ ಪ್ರಯತ್ನಗಳ ಬಗ್ಗೆ ಈ ಡ್ಯಾಕುಮೆಂಟರಿಯಲ್ಲಿ ಸೆರೆ ಹಿಡಿಯಲಾಗಿದ್ದು, ಇಸ್ರೋ ಯಶಸ್ವಿಯಾಗಿರುವ ಅನೇಕ ಕಠಿಣ ಸನ್ನಿವೇಶಗಳ ಬಗ್ಗೆ ಜನರಿಗೆ ತಿಳಿಸುವ ಸಂಪೂರ್ಣ ಮಾಹಿತಿ ಇದರಲ್ಲಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಮಾಧವನ್, ಮನುಷ್ಯರನ್ನ ಇಂದು ಎಲ್ಲಿಗೆ ಕರೆತಂದು ನಿಲ್ಲಿಸಿದ್ದೇವೆ. ಅದು ಈಗಲೂ ಮುಂದುವರೆದಿದ್ದು, ಈ ಅದ್ಭುತ ಕಲಿಕಾ ಅವಕಾಶಕ್ಕಾಗಿ ನಾನು ಡಿಸ್ಕವರಿ ಇಂಡಿಯಾಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿರುವುದಕ್ಕೆ ನನಗೆ ಗೌರವವಿದೆ ಎಂದರು.

'India's Space Odyssey' ಡಾಕ್ಯುಮೆಂಟರಿ

ಇದನ್ನೂ ಓದಿರಿ:ರೈಲ್ವೆ ಸಿಬ್ಬಂದಿಗೆ 78 ದಿನದ ಬೋನಸ್​​; ಟೆಕ್ಸ್​​ಟೈಲ್​ ಪಾರ್ಕ್​ ನಿರ್ಮಾಣಕ್ಕೆ 4,445 ಕೋಟಿ ರೂ: ಕೇಂದ್ರದ ಮಹತ್ವದ ನಿರ್ಧಾರ

ಮಿಡಿಟೆಕ್​​ ಸ್ಟುಡಿಯೋಸ್​​​ನಿಂದ 'India's Space Odyssey' ನಿರ್ಮಾಣಗೊಂಡಿದ್ದು, ಇಸ್ರೋದ ವಿಭಿನ್ನ ತಜ್ಞರು, ಬಾಹ್ಯಾಕಾಶ ಇತಿಹಾಸಕಾರರು ಮತ್ತು ಸಂಶೋಧಕರ ಸಾಧನೆ ಇದರಲ್ಲಿದೆ.

ಆರಂಭದಿಂದಲೂ ಭಾರತೀಯ ಬಾಹ್ಯಾಕಾಶ ಗಮನಾರ್ಹವಾದ ಸಾಧನೆ ಮಾಡಿದ್ದು, ಡಿಸ್ಕವರಿಯಂತಹ ಕಾರ್ಯಕ್ರಮದಲ್ಲಿ ಈ ಡಾಕ್ಯುಮೆಂಟರಿ ಪ್ರಸಾರಗೊಂಡು ಜನರಿಗೆ ತಲುಪುತ್ತಿರುವುದು ನಿಜಕ್ಕೂ ಸಂತೋಷವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ. ಶಿವನ್ ತಿಳಿಸಿದ್ದಾರೆ.​​ ಈ ಡಾಕ್ಯುಮೆಂಟರಿ ಅಕ್ಟೋಬರ್​​ 7ರಂದು ಪ್ರದರ್ಶನಗೊಳ್ಳಲಿದೆ.

ABOUT THE AUTHOR

...view details