ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನೆರವಿನ ಹಸ್ತ ಮುಂದುವರೆದಿದ್ದು, ಸೊಮಾಲಿಯಾಗೆ ಕೋವಿಡ್ ಲಸಿಕೆ ವಿತರಿಸಲು ಸರಕು ವಿಮಾನ ತೆರಳಿದೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮೇಡ್ ಇನ್ ಇಂಡಿಯಾ ಲಸಿಕೆ ಸೋಮಾಲಿಯಾ ತಲುಪಿದೆ ಎಂದಿದ್ದಾರೆ. ‘ಮೈತ್ರಿ’ ಅಭಿಯಾನದಡಿಯಲ್ಲಿ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಯು ನೆರೆರಾಷ್ಟ್ರಗಳಿಗೆ ನೆರವಿನ ಹಸ್ತವಾಗಿ ತಲುಪುತ್ತಿದೆ.