ಕರ್ನಾಟಕ

karnataka

ETV Bharat / bharat

ಯುವತಿ ನಾಪತ್ತೆ ಪ್ರಕರಣ: ತಂದೆಯ ವಿಡಿಯೋದಿಂದ ಬಯಲಿಗೆ ಬಂತು ನಿಗೂಢ ಸತ್ಯ! - ಅಹಮದಾಬಾದ್ ನಕಲಿ ತಂದೆ ಪ್ರಕರಣ

ವಿಡಿಯೋ ಬಿಡುಗಡೆ ಮಾಡಿರುವ ಲುಧಿಯಾನ ನಿವಾಸಿ ಕುಲ್ದೀಪ್​​ ಸಿಂಗ್​​​​ ಸಾಗಿರಾಳ ನಕಲಿ ತಂದೆ ಎಂದು ತಿಳಿದು ಬಂದಿದೆ. ಅಲ್ಲದೇ 17 ವರ್ಷದ ಅಸ್ಸೋಂ ನಿವಾಸಿ ಸಾಗಿರಾಳನ್ನು ತನ್ನ ಸ್ವಂತ ಮಗಳೆಂದು ಹೇಳಿಕೊಂಡು ದೈಹಿಕವಾಗಿ ಹಿಂಸಿಸುತ್ತಿದ್ದರಿಂದ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ. ಮಣಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ludhiana-man-becoming-the-fake-father-of-the-minor-girl
ಯುವತಿ ನಾಪತ್ತೆ ಪ್ರಕರಣ

By

Published : Mar 18, 2021, 1:10 PM IST

ಅಹಮದಾಬಾದ್: ನಗರದ ಮಣಿನಗರ ಪ್ರದೇಶದ ಗುರುದ್ವಾರ ಬಳಿ ಸಾಗಿರಾ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳು ಕಾಣೆಯಾದ ಬಗ್ಗೆ ತಂದೆ ವಿಡಿಯೋ ಬಿಡುಗಡೆ ಮಾಡಿದ ಮೇಲೆ ವಾಸ್ತವತೆ ಬೆಳಕಿಗೆ ಬಂದಿದೆ.

ತಂದೆಯ ವಿಡಿಯೋದಿಂದ ಬಯಲಿಗೆ ಬಂತು ನಿಗೂಢ ಸತ್ಯ

ವಿಡಿಯೋ ಬಿಡುಗಡೆ ಮಾಡಿರುವ ಲುಧಿಯಾನ ನಿವಾಸಿ ಕುಪ್ದೀಪ್​ ಸಿಂಗ್​​​​ ಸಾಗಿರಾಳ ನಕಲಿ ತಂದೆ ಎಂದು ತಿಳಿದು ಬಂದಿದೆ. ಅಲ್ಲದೇ 17 ವರ್ಷದ ಅಸ್ಸೋಂ ನಿವಾಸಿ ಸಾಗಿರಾಳನ್ನು ತನ್ನ ಸ್ವಂತ ಮಗಳೆಂದು ಹೇಳಿಕೊಂಡು ದೈಹಿಕವಾಗಿ ಹಿಂಸಿಸುತ್ತಿದ್ದರಿಂದ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾಗಿ ಮಾಹಿತಿ. ಮಣಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ.

ವಿಕಲಚೇತನನಾಗಿದ್ದ ಆರೋಪಿ ಸಾಗಿರಾಳನ್ನು ತನ್ನ ಸ್ವಂತ ಮಗಳೆಂದು ಹೇಳಿಕೊಂಡು ವಿವಿಧ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿದ್ದ. ಅಸ್ಸೋಂನ ಸಾಗಿರಾಗೆ ಪಂಜಾಬಿ ಹೆಸರನ್ನು ಇಟ್ಟಿದ್ದ. ಪೊಲೀಸರ ತನಿಖೆಯಲ್ಲಿ ಸಂತ್ರಸ್ತೆಯ ಪೋಷಕರು ಇರುವುದು ಪತ್ತೆಯಾಗಿದೆ. ಪೊಲೀಸ್ ತನಿಖೆಯ ವೇಳೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಅದರಲ್ಲಿ ಸಾಗಿರಾ ರಿಕ್ಷಾ ಮತ್ತು ಬೈಕ್​​ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ.

ABOUT THE AUTHOR

...view details