ಖನ್ನಾ, ಪಂಜಾಬ್ : ಲೂಧಿಯಾನಾ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಗಗನ್‌ದೀಪ್ ಸಿಂಗ್ ಅವರ ನಿವಾಸದ ಮೇಲೆ ಎನ್‌ಐಎ ದಾಳಿ ನಡೆಯುತ್ತಿದ್ದು, ಎನ್‌ಐಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಖನ್ನಾದ ಗುರುತೇಗ್ ಬಹದ್ದೂರ್ ನಗರದಲ್ಲಿರುವ ಗಗನ್ದೀಪ್ಸಿಂಗ್ ಅವರ ಹಳೆಯ ಮನೆಯ ಮೇಲೆ ದಾಳಿ ನಡೆದಿದ್ದು, ಮನೆಯ ಸಮೀಪ ಯಾರನ್ನೂ ಬಿಡುತ್ತಿಲ್ಲ ಮೂಲಗಳು ಮಾಹಿತಿ ನೀಡಿವೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ಗಗನ್‌ದೀಪ್ ಅವರು ಪ್ರೊಫೆಸರ್ ಕಾಲೋನಿಯಲ್ಲಿರುವ ಹೊಸ ಮನೆಗೆ ತೆರಳುವ ಮೊದಲು ಖನ್ನಾದಲ್ಲಿರುವ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅಂದಿನಿಂದ ಈ ಮನೆ ಕೆಲ ವರ್ಷಗಳಿಂದ ಮುಚ್ಚಿತ್ತು ಎನ್ನಲಾಗಿದೆ. ಎನ್‌ಐಎ ತಂಡದ ಈ ಹಠಾತ್ ದಾಳಿಯ ಮೂಲಕ ಹೊಸ ಸುಳಿವುಗಳು ಸಿಗಬಹುದು ಎಂದು ಹೇಳಲಾಗುತ್ತಿದೆ.