ಕರ್ನಾಟಕ

karnataka

ETV Bharat / bharat

ಫೋರ್ಬ್ಸ್ ಇಂಡಿಯಾ 2021 ಸಾಧಕರ ಪಟ್ಟಿಯಲ್ಲಿ ಪೌಲೋಮಿ ಶುಕ್ಲಾ - ಲಕ್ನೋ ಮೂಲದ ವಕೀಲೆ ಮತ್ತು ಲೇಖಕಿ ಪೌಲೋಮಿ ಪಾವಿನಿ ಶುಕ್ಲಾ

ಫೋರ್ಬ್ಸ್ ಇಂಡಿಯಾ 30 ಅಂಡರ್‌ 30' ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಲೇಖಕಿ ಪೌಲೋಮಿ ಪಾವಿನಿ ಶುಕ್ಲಾ ಅವರ ಹೆಸರು ಇದೆ.

ಪೌಲೋಮಿ ಪಾವಿನಿ ಶುಕ್ಲಾ
ಪೌಲೋಮಿ ಪಾವಿನಿ ಶುಕ್ಲಾ

By

Published : Feb 5, 2021, 6:50 PM IST

ಲಕ್ನೋ: ಫೋರ್ಬ್ಸ್ ಇಂಡಿಯಾ 30 ಜನ ಸಾಧಕರ ವಾರ್ಷಿಕ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಲಕ್ನೋ ಮೂಲದ ವಕೀಲೆ ಮತ್ತು ಲೇಖಕಿ ಪೌಲೋಮಿ ಪಾವಿನಿ ಶುಕ್ಲಾ ಅವರ ಹೆಸರು ಸಹ ಇದೆ.

ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ದೃಷ್ಟಿಯಿಂದ ಪೌಲೋಮಿ ಶುಕ್ಲಾ ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಇವರ ಈ ಕಾರ್ಯವನ್ನು ಗುರುತಿಸಿ 'ಫೋರ್ಬ್ಸ್ ಇಂಡಿಯಾ 30 ಅಂಡರ್‌ 30' ಪಟ್ಟಿಯಲ್ಲಿ ಶುಕ್ಲಾ ಅವರ ಹೆಸರನ್ನು ಸೇರಿಸಲಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಶುಕ್ಲಾ,, ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ನನ್ನ ಹೆಸರಿರುವುದು ಸಂತೋಷ ತಂದಿದೆ. ನಮ್ಮ ದೇಶದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಅನಾಥ ಮಕ್ಕಳಿದ್ದಾರೆ. 1 ಲಕ್ಷಕ್ಕಿಂತ ಕಡಿಮೆ ಜನರು ಅನಾಥಾಶ್ರಮಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಸುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಜೊತೆಗೆ ಅನೇಕ ಶಾಸಕರು, ಮುಖ್ಯಮಂತ್ರಿ, ಮಂತ್ರಿಗಳು ಮತ್ತು ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details