ಲಖನೌ(ಉತ್ತರಪ್ರದೇಶ):ಹಜರತ್‌ಗಂಜ್‌ನ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಸರ್ಕಾರಿ ಆಸ್ಪತ್ರೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಆಸ್ಪತ್ರೆಯ ಉದ್ಯೋಗಿಯೊಬ್ಬರ (Employee birthday video viral) ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲ ಪುರುಷ ಉದ್ಯೋಗಿಗಳು ವಿಡಿಯೋದಲ್ಲಿ ಕಾಣಬಹುದಾಗಿದೆ.
ಸರ್ಕಾರಿ ಆಸ್ಪತ್ರೆಯ ವಿಡಿಯೋ ವೈರಲ್ ಹುಟ್ಟುಹಬ್ಬದ ದಿನವಾದ ಬರ್ತ್ಡೇ ಬಾಯ್ಗೆ ಸಹೋದ್ಯಗಿಗಳು ಕೇಕ್ ಹಚ್ಚಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ, ಫಾರ್ಮಸಿ ಇಂಟರ್ನ್‌ಗಳು ಕೇಕ್ ಕತ್ತರಿಸಿದ ನಂತರ ಬೆಲ್ಟ್‌ಗಳಿಂದ ಪರಸ್ಪರ ಹೊಡೆದುಕೊಳ್ಳುವುದು ಕಂಡು ಬರುತ್ತದೆ. ಸರ್ಕಾರಿ ಆಸ್ಪತ್ರೆಯ ಉದ್ಯೋಗಿಗಳ ಜನ್ಮದಿನ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಆಸ್ಪತ್ರೆಯ ನಿರ್ದೇಶಕ ಡಾ.ಆನಂದ್ ಓಜಾನ್ ಮಾತನಾಡಿ, ಭಾನುವಾರ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಪರಸ್ಪರ ಬೆಲ್ಟ್‌ನಿಂದ ಹೊಡೆದುಕೊಳ್ಳುತ್ತಿರುವ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಆಸ್ಪತ್ರೆ ಸಿಬ್ಬಂದಿ ರಾತ್ರಿ ಪಾರ್ಟಿ ಮಾಡುತ್ತಿರುವುದು ಕಂಡು ಬರುತ್ತಿದೆ. ಆಸ್ಪತ್ರೆಯಲ್ಲಿ ಇರುವ ಗಾರ್ಡ್‌ಗಳಿಂದ ಹಿಡಿದು ತುರ್ತು ಮತ್ತು ಒಪಿಡಿ ಸಿಬ್ಬಂದಿಯವರೆಗೂ ಈ ವಿಡಿಯೋದಲ್ಲಿರುವುದು ಕಂಡು ಬಂದಿದೆ ಎಂದರು.
ಹುಟ್ಟುಹಬ್ಬದ ಕೇಕ್ ಕತ್ತರಿಸಿದ ನಂತರ ಇಂಟರ್ನ್ ಉದ್ಯೋಗಿಗಳು ಪರಸ್ಪರ ಬೆಲ್ಟ್‌ಗಳಿಂದ ಹೊಡೆದುಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಆಸ್ಪತ್ರೆಯ ಒಪಿಡಿಯಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಇದು ಗಂಭೀರ ವಿಚಾರ. ಈ ಪ್ರಕರಣದಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೋಮವಾರ, ವಿಡಿಯೋದಲ್ಲಿ ಕಂಡುಬರುವ ಎಲ್ಲ ಇಂಟರ್ನ್ ಉದ್ಯೋಗಿಗಳಿಂದ ಸ್ಪಷ್ಟೀಕರಣವನ್ನು ಕೇಳಲಾಗುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.
ಓದಿ:ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ: ಜಿಲ್ಲಾಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಲು ಮುಂದಾದ ಸರ್ಕಾರ