ಕರ್ನಾಟಕ

karnataka

By

Published : Apr 18, 2022, 6:53 PM IST

ETV Bharat / bharat

ಭೂಸೇನಾ ಮುಖ್ಯಸ್ಥರಾಗಿ ಲೆ. ಜನರಲ್ ಮನೋಜ್ ಪಾಂಡೆ ನೇಮಕ

ಭಾರತೀಯ ಸೇನಾ ಮುಖ್ಯಸ್ಥರಾಗಿರುವ ನರವಣೆ ಅವರ ಅಧಿಕಾರವಧಿ ಏಪ್ರಿಲ್ 30ಕ್ಕೆ ಅಂತ್ಯಗೊಳ್ಳಲಿರುವ ಕಾರಣ ಇದೀಗ ಹೊಸ ಮುಖ್ಯಸ್ಥರ ಆಯ್ಕೆಯಾಗಿದೆ.

Army chief Manoj Pande
Army chief Manoj Pande

ಮುಂಬೈ:ಭಾರತೀಯ ಭೂಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ. ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನಿಂದ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊದಲ ಅಧಿಕಾರಿ ಇವರಾಗಿದ್ದಾರೆ. ಸೇನಾ ಮುಖ್ಯಸ್ಥರಾಗಿರುವ ಜನರಲ್ ಮನೋಜ್ ಮುಕುಂದ್​ ನರವಣೆ ಅವರ ಅಧಿಕಾರವಧಿ ಏಪ್ರಿಲ್​ 30ಕ್ಕೆ ಮುಗಿಯಲಿದೆ.

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಕ್ಷಣಾ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ನ್ಯಾಷನಲ್ ಡಿಫೆನ್ಸ್​ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಪಾಂಡೆ, 1982ರ ಡಿಸೆಂಬರ್​ ತಿಂಗಳಲ್ಲಿ ಕಾರ್ಪ್ಸ್​​ ಆಪ್​ ಇಂಜಿನಿಯರ್ಸ್​​ಗೆ ನಿಯೋಜನೆಗೊಂಡಿದ್ದರು. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ 'ಆಪರೇಷನ್​ ಪರಾಕ್ರಮ' ನಡೆದ ಸಂದರ್ಭದಲ್ಲಿ ಇವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

39 ವರ್ಷಗಳ ಮಿಲಿಟರಿ ವೃತ್ತಿ ಜೀವನದಲ್ಲಿ ಪಾಂಡೆ ಅವರು ಅನೇಕ ಪ್ರಮುಖ ಹುದ್ದೆ ನಿಭಾಯಿಸಿದ್ದು, ಇದೀಗ ಭಾರತೀಯ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ.

ABOUT THE AUTHOR

...view details