ಶ್ರೀನಗರ(ಜಮ್ಮು ಕಾಶ್ಮೀರ್) :ಲೆಫ್ಟಿನೆಂಟ್ ಜನರಲ್ ಅಮರ್ದೀಪ್ ಸಿಂಗ್ ಔಜ್ಲಾ ಅವರನ್ನು ಶ್ರೀನಗರದಲ್ಲಿರುವ 15 ಚಿನಾರ್ ಕಾರ್ಪ್ಸ್ನ 51ನೇ ಕಮಾಂಡರ್ ಆಗಿ ನೇಮಿಸಲಾಗಿದೆ. 1987ರಲ್ಲಿ ಭಾರತೀಯ ಸೇನೆಗೆ ಇವರನ್ನು ನಿಯೋಜನೆ ಮಾಡಲಾಗಿತ್ತು. ಸೇನಾ ಮೂಲಗಳ ಪ್ರಕಾರ, ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರು ಕಾಶ್ಮೀರ್ ಕಣಿವೆಯಲ್ಲಿ ಒಂದು ವಿಭಾಗಕ್ಕೆ ಕಮಾಂಡರ್ ಆಗಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಒಳನುಸುಳುವಿಕೆಯನ್ನು ತಡೆಯುವ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.
ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರು ಮುಂದಿನ ತಿಂಗಳೊಳಗೆ 15 ಕಾರ್ಪ್ಸ್ನ ಕಮಾಂಡ್ ಅನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಈ ಹಿಂದೆ ಕುಪ್ವಾರದಲ್ಲಿ 268 ಇನ್ಫ್ ಬ್ರಿಗೇಡ್ ಮತ್ತು 28 ಇನ್ಫ್ ಡಿವಿ ಎರಡನ್ನೂ ಕಮಾಂಡ್ ಮಾಡಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಔಜ್ಲಾ ತಮ್ಮ ಶೌರ್ಯಕ್ಕಾಗಿ ಎಸ್ಎಂ, ವಿಎಸ್ಎಂ, ವೈಎಸ್ಎಂ ಪದಕಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.