ಕರ್ನಾಟಕ

karnataka

ETV Bharat / bharat

ಭಾರತ- ಚೀನಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಲೆಫ್ಟಿನೆಂಟ್ ಕರ್ನಲ್ ಹೃದಯಾಘಾತದಿಂದ ನಿಧನ - ವಿವೇಕಾನಂದ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣ

ಲೆಫ್ಟಿನೆಂಟ್ ಕರ್ನಲ್ ವಾಸುದೇವ್ ದಾಮೋದರ್ ಅವರಿ, 170 ಫೀಲ್ಡ್ ರೆಜಿಮೆಂಟ್ ವೀರ್ ರಾಜಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಅವರಿ ಮೇಜರ್ ಹುದ್ದೆಯಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ಪಡೆದಿದ್ದರು. ವಿವೇಕಾನಂದ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.

ಲೆಫ್ಟಿನೆಂಟ್ ಕರ್ನಲ್ ವಾಸುದೇವ್ ದಾಮೋದರ್
ಲೆಫ್ಟಿನೆಂಟ್ ಕರ್ನಲ್ ವಾಸುದೇವ್ ದಾಮೋದರ್

By

Published : Oct 6, 2022, 10:34 PM IST

ಯಾವತ್ಮಲ್: ಅರುಣಾಚಲ ಪ್ರದೇಶದ ಭಾರತ ಚೀನಾ ಗಡಿಯಲ್ಲಿ ಕರ್ತವ್ಯದದಲ್ಲಿದ್ದ ಮಹಾರಾಷ್ಟ್ರದ ವಾಣಿ ತಾಲೂಕಿನ ಮೂರ್ಧೋನಿ ಮೂಲದ ಲೆಫ್ಟಿನೆಂಟ್ ಕರ್ನಲ್ ವಾಸುದೇವ್ ದಾಮೋದರ್ ಅವರಿ (35) ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಹುಟ್ಟೂರು ಮೂರ್ಧೋನಿಯಲ್ಲಿ ಶುಕ್ರವಾರ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸ್ವರಾಜ್ಯಕ್ಕೆ ಬರುವ ವೀರ ಯೋಧನ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ನಮನದ ವೇಳೆ, ಸಂಸದ ಬಾಳು ಧನೋರ್ಕರ್, ಶಾಸಕ ಸಂಜೀವರೆಡ್ಡಿ ಬೋಡಕುರವಾರ, ಉಪವಿಭಾಗಾಧಿಕಾರಿ ಡಾ.ಶರದ್ ಜಾವ್ಲೆ, ತಹಸೀಲ್ದಾರ್ ನಿಖಿಲ್ ಧುಲ್ಧರ್, ಉಪವಿಭಾಗಾಧಿಕಾರಿ ಸಂಜಯ ಪುಜಾಲವಾರ, ಠಾಣೆದಾರ ರಾಮಕೃಷ್ಣ ಮಹಲ್ಲೆ, ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ವಾಸುದೇವ್ ದಾಮೋದರ್ ಅವರಿ, 170 ಫೀಲ್ಡ್ ರೆಜಿಮೆಂಟ್ ವೀರ್ ರಾಜಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಅವರಿ ಮೇಜರ್ ಹುದ್ದೆಯಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ಪಡೆದಿದ್ದರು. ವಿವೇಕಾನಂದ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.

ಆ ಬಳಿಕ ಎನ್‌ಡಿಎಗೆ ಸೇರ್ಪಡೆಗೊಂಡಿದ್ದರು. ಮೇಜರ್ ಆಗಿ ಸೈನ್ಯಕ್ಕೆ ಸೇರಿದ್ದ ವಾಸುದೇವ್ ದಾಮೋದರ್, ಮಂಗಳವಾರ ಅಕ್ಟೋಬರ್ 4 ರಂದು ಅರುಣಾಚಲ ಪ್ರದೇಶದ ಭಾರತ - ಚೀನಾ ಗಡಿಯಲ್ಲಿ ಅಂದರೆ ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆ ಸಮಯದಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರ ಸಹೋದ್ಯೋಗಿಗಳು ತಕ್ಷಣ ಅವರನ್ನು ಗುವಾಹಟಿಯ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ:ಆನ್‌ಲೈನ್ ರಮ್ಮಿಗೆ ವ್ಯಸನಿಯಾಗಿದ್ದ ಯುವಕ ಆತ್ಮಹತ್ಯೆ

For All Latest Updates

ABOUT THE AUTHOR

...view details