ಹೈದರಾಬಾದ್: ಪಂಜಾಬ್ನಲ್ಲಿರುವ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳು ದೇಶ ಮಾತ್ರವಲ್ಲ, ಪ್ರಪಂಚದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಇದೀಗ ಹೊಸದೊಂದು ಸುದ್ದಿ ಹೊರಬಿದ್ದಿದೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯೊಬ್ಬ ಬರೋಬ್ಬರಿ 3 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಪಡೆದುಕೊಂಡಿದ್ದಾನೆ. ಈ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾನೆ.
ಕೇರಳ ಮೂಲದ ಯಾಸಿರ್ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಪದವಿ ಪಡೆದುಕೊಂಡಿದ್ದು, ಈತನಿಗೆ ವಿಶ್ವ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ 3ಕೋಟಿ ರೂಪಾಯಿ ಪ್ಯಾಕೇಜ್ ನೀಡಿದೆ. ಎಲ್ಪಿಯುನಿಂದ 2018ರಲ್ಲಿ ಪಾಸ್ ಆಗಿರುವ ಯಾಸಿರ್ ಇಷ್ಟೊಂದು ಪ್ಲೇಸ್ಮೆಂಟ್ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇಷ್ಟೊಂದು ಹೆಚ್ಚಿನ ಪ್ಯಾಕೇಜ್ ಪಡೆದುಕೊಂಡಿರುವ ಸಾಲಿನಲ್ಲಿ ಯಾಸಿರ್ ಮೊದಲಿಗರಾಗಿದ್ದಾರೆ.
ಇದನ್ನೂ ಓದಿರಿ:ಐಐಟಿ-ಐಎಸ್ಎಂ ಧನಬಾದ್ ವಿದ್ಯಾರ್ಥಿಗೆ ಗೂಗಲ್ನಿಂದ ₹56 ಲಕ್ಷ ಪ್ಯಾಕೇಜ್‌ನ ಆಫರ್!