ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪೆಟ್ರೋಲಿಂ ಕಂಪನಿಗಳು ಬರೋಬ್ಬರಿ 266 ರೂಪಾಯಿ ಹೆಚ್ಚಿಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಈ ಹೊಸ ದರವು ಇಂದಿನಿಂದಲೇ (ನವಂಬರ್ 1) ಜಾರಿಗೆ ಬಂದಿದೆ. ನಿನ್ನೆಯವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1734 ರೂ. ಇತ್ತು. ಆದರೆ ಇಂದಿನಿಂದ ಈ ದರ 2000.50 ರೂ. ಆಗಲಿದೆ.
ಇದನ್ನೂ ಓದಿ: ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ; ಮುಂದಿನ ವಾರ ಅಡುಗೆ ಸಿಲಿಂಡರ್ ಬೆಲೆ 100 ರೂ.ಏರಿಕೆ!?
ಕಳೆದ ಅಕ್ಟೋಬರ್ 1 ರಿಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲೆ 43 ರೂ.ಹೆಚ್ಚಿಸಲಾಗಿತ್ತು. ಸದ್ಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ಗಳಲ್ಲಿ ಯಾವುದೇ ಹೆಚ್ಚಳವಿಲ್ಲವಾದರೂ ಮುಂದಿನ ಕೆಲ ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 100 ರೂ.ಗಳಷ್ಟು ಹೆಚ್ಚಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಇದನ್ನೂ ಓದಿ: ಮುಂದುವರಿದ ಪೆಟ್ರೋಲ್-ಡೀಸೆಲ್ ದರ ಏರಿಕೆ.. ವಾಹನ ಸವಾರರು ಕಂಗಾಲು