ನವದೆಹಲಿ: ಭಾರತದಲ್ಲಿ 1961 ರಿಂದ ವೃದ್ಧರ ಜನಸಂಖ್ಯೆಯು ಹೆಚ್ಚುತ್ತಿದೆ. 2021ರ ಹೊತ್ತಿಗೆ ದೇಶದಲ್ಲಿ ವಯೋವೃದ್ಧರ ಜನಸಂಖ್ಯೆ 13.8 ಕೋಟಿಗೆ ತಲುಪಿದೆ. ಇದಕ್ಕೆ ಪ್ರಮುಖ ಕಾರಣ ಸಾವಿನ ದರ (Death Rate) ಇಳಿಕೆಯಾಗಿರುವುದು ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.
ಕಳೆದ ಎರಡು ದಶಕಗಳಲ್ಲಿ (2021 ರವರೆಗೆ) ವಯಸ್ಸಾದ ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ 2031ರ ಹೊತ್ತಿಗೆ ವಯಸ್ಸಾದ ಸ್ತ್ರೀಯರು ವಯಸ್ಸಾದ ಪುರುಷರಿಗಿಂತ ಹೆಚ್ಚಾಗುತ್ತಾರೆ ಅನ್ನೋದು ಒಂದು ಅಂದಾಜು.
'ಹಿರಿಯರು' ಸರ್ಕಾರದ ವ್ಯಾಖ್ಯಾನ ಹೀಗಿದೆ..
ಇಷ್ಟಕ್ಕೂ ಹಿರಿಯರು ಅಂದರೆ ಯಾರು? ಹೌದು, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರನ್ನು ಹಿರಿಯರು ಅಥವಾ ವೃದ್ಧರೆಂದು ವರದಿಯಲ್ಲಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ 2011-2036ರ ರಾಜ್ಯಗಳ ಜನಸಂಖ್ಯಾ ಅಂದಾಜಿನ ಪ್ರಕಾರ, 2021ರಲ್ಲಿ ಭಾರತದಲ್ಲಿ ಸುಮಾರು 138 ಮಿಲಿಯನ್ (13.8 ಕೋಟಿ) ವೃದ್ಧರು 67 ಮಿಲಿಯನ್ (6 ಕೋಟಿ 70 ಲಕ್ಷ) ಪುರುಷರು ಮತ್ತು 71 ಮಿಲಿಯನ್ (7 ಕೋಟಿ 1 ಲಕ್ಷ) ಮಹಿಳೆಯರು ಒಳಗೊಂಡಿದ್ದಾರೆ ಎಂದು ಎನ್ಎಸ್ಒ ‘ಭಾರತದಲ್ಲಿನ ಹಿರಿಯರು-2021 (Elderly in India 2021)’ ವರದಿ ಉಲ್ಲೇಖಿಸಿದೆ.
ಆರೋಗ್ಯ ಯೋಜನೆಗಳ ಅನುಷ್ಠಾನದ ಪ್ರತಿಫಲ:
ಈ ವರದಿಯ ಪ್ರಕಾರ, ದೇಶದಲ್ಲಿ ವಯೋವೃದ್ಧರ ಜನಸಂಖ್ಯೆಯು 1961ರಿಂದ ಹೆಚ್ಚಳವಾಗುತ್ತಿದೆ. 1981ರ ಜನಗಣತಿಯ ನಂತರ ದೇಶದಲ್ಲಿ ವಿವಿಧ ಆರೋಗ್ಯ ಯೋಜನೆಗಳಿಂದ ಮರಣ ಪ್ರಮಾಣ ಇಳಿಕೆಯಿಂದಾಗಿ ವಯಸ್ಸಾದವರ ಜನಸಂಖ್ಯೆಯ ಬೆಳವಣಿಗೆಯು ವೇಗ ಪಡೆದುಕೊಂಡಿತು.
2031ರ ವೇಳೆಗೆ ವಯಸ್ಸಾದ ಮಹಿಳೆಯರೇ ಹೆಚ್ಚು:
1991ರ ಜನಗಣತಿಯ ಪ್ರಕಾರ, ವಯಸ್ಸಾದ ಮಹಿಳೆಯರ ಸಂಖ್ಯೆಯು ವಯಸ್ಸಾದ ಪುರುಷರ ಸಂಖ್ಯೆಯನ್ನು ಮೀರಿದೆ. ಆದಾಗ್ಯೂ, ಕಳೆದ ಎರಡು ದಶಕಗಳಲ್ಲಿ, ಈ ಪ್ರವೃತ್ತಿಯು ವ್ಯತಿರಿಕ್ತವಾಗಿದೆ. ಅಷ್ಟೇ ಅಲ್ಲ, ವಯಸ್ಸಾದ ಪುರುಷರು ವಯಸ್ಸಾದ ಮಹಿಳೆಯರಿಗಿಂತ ಹೆಚ್ಚಿದ್ದಾರೆ. 2031ರ ವೇಳೆಗೆ ವಯಸ್ಸಾದ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಯನ್ನು ಮೀರುತ್ತದೆ ಎಂದು ಅಂದಾಜಿಸಲಾಗಿದೆ.
2011ರಲ್ಲಿ ವೃದ್ಧರ ಸಂಖ್ಯೆ 10 ಕೋಟಿ:
2001-2011ರ ಅವಧಿಯಲ್ಲಿ ವೃದ್ಧರ ಸಂಖ್ಯೆ 27 ಮಿಲಿಯನ್ (2.7 ಕೋಟಿ) ಗಿಂತ ಹೆಚ್ಚಿದೆ. 2011ರಲ್ಲಿ ಭಾರತದಲ್ಲಿ ವೃದ್ಧರ ಜನಸಂಖ್ಯೆ 103.8 ಮಿಲಿಯನ್ (10.38 ಕೋಟಿ) 52.8 ಮಿಲಿಯನ್ ಪುರುಷರು (5.28 ಕೋಟಿ) ಮತ್ತು 51.1 ಮಿಲಿಯನ್ ಮಹಿಳೆಯರು (5.11 ಕೋಟಿ). 2031 ರ ವೇಳೆಗೆ ಈ ಅಂಕಿಅಂಶ 92.9 ಮಿಲಿಯನ್ ವೃದ್ಧ ಪುರುಷರು (9.29 ಕೋಟಿ) ಮತ್ತು 100.9 ಮಿಲಿಯನ್ ವೃದ್ಧ ಮಹಿಳೆಯರು (10.09 ಕೋಟಿ) ಸೇರಿದಂತೆ 1931 ಮಿಲಿಯನ್ (19.38 ಕೋಟಿ) ಗೆ ತಲುಪುವ ಸಾಧ್ಯತೆ ಇದೆ.
2011-2021ರಲ್ಲಿ ವೃದ್ಧರ ಜನಸಂಖ್ಯೆ ಶೇ 35 ರಷ್ಟು ಹೆಚ್ಚಳ:
2011 ರಿಂದ 2021 ರ ಅವಧಿಯಲ್ಲಿ, ಸಾಮಾನ್ಯ ಜನಸಂಖ್ಯೆಯು ಶೇಕಡಾ 12.4 ರಷ್ಟು, ಹಿರಿಯ ಜನಸಂಖ್ಯೆಯು ಶೇಕಡಾ 35.8 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತೋರಿಸಿದೆ. 2021 ರಿಂದ 2031 ರ ಅವಧಿಯಲ್ಲಿ ದೇಶದ ಸಾಮಾನ್ಯ ಜನಸಂಖ್ಯೆಯು ಶೇಕಡಾ 8.4 ರಷ್ಟು ಏರಿಕೆಯಾಗಲಿದ್ದು, ಭಾರತದಲ್ಲಿ ವೃದ್ಧರ ಜನಸಂಖ್ಯೆಯು ಶೇಕಡಾ 40.5 ರಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಿದೆ.
2031 ರ ಹೊತ್ತಿಗೆ ಒಟ್ಟು ಜನಸಂಖ್ಯೆಯ ಶೇ 13 ರಷ್ಟು ವೃದ್ಧರು: