ಹಮೀರ್‌ಪುರ:ಜಿಲ್ಲೆಯ ರಾಥ್ ಕೊಟ್ವಾಲಿ ಪ್ರದೇಶದ ಫರ್ಸೌಲಿಯಾನಾ ಬಳಿ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪ್ರೇಮಿಗಳ ಮೃತ ದೇಹ ಪತ್ತೆಯಾಗಿದೆ.
ಇಬ್ಬರ ಶವಗಳು ನೇಣು ಕೋಣೆಯಲ್ಲಿ ನೇತಾಡುತ್ತಿರುವುದು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲಿನ ಬೀಗ ಮುರಿದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಮಧ್ಯಪ್ರದೇಶದ ಗೌರಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲ್ಟಾ ಗ್ರಾಮದ ನಿವಾಸಿ 22 ವರ್ಷದ ಕಾಮತಾ ನಾಮದೇವ್ ಪುತ್ರ ಸತೀಶ್ ಹರನ್ ಒಂದು ದಿನ ಮೊದಲು ಫರ್ಸೌಲಿಯಾನಾ ಮೊಹಲ್ಲಾದ ಹರ್ಜು ಕುಶ್ವಾಹ ಅವರ ಮನೆಯಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದರು. ದಿನವಿಡಿ ದಂಪತಿ ಹೊರ ಬಾರದಿದ್ದಾಗ ಸ್ಥಳೀಯರು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಆಗ ಈ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾಗಿದೆ. ಇಬ್ಬರ ದೇಹಗಳು ಒಂದೇ ಹಗ್ಗದ ಎರಡು ಬದಿಗಳಲ್ಲಿ ನೇತಾಡುತ್ತಿದ್ದವು.
ಜಿಲ್ಲಾಧಿಕಾರಿ ಅಖಿಲೇಶ್ ರಾಜನ್, ಇನ್ಸ್‌ಪೆಕ್ಟರ್ ಕೆ.ಕೆ.ಪಾಂಡೆ ಸ್ಥಳಕ್ಕೆ ಬಂದು ಬಾಗಿಲಿನ ಬೀಗ ಮುರಿದು ಇಬ್ಬರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ನರೇಶ್ ಕುಮಾರ್ ಸಿಂಗ್ ಮಾತನಾಡಿ, ಈ ಘಟನೆ ಪ್ರೇಮ ಸಂಬಂಧದಿಂದ ನಡೆದಿರಬಹುದು. ಮೃತರಿಬ್ಬರನ್ನೂ ಗುರುತಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.