ಕರ್ನಾಟಕ

karnataka

ETV Bharat / bharat

ಪ್ರೀತಿಗೆ ಮನೆಯವರ ವಿರೋಧ: ಕುಟುಂಬಸ್ಥರ ಎದುರೇ ಆತ್ಮಹತ್ಯೆಗೆ ಶರಣಾದ ಜೋಡಿ - ಕುಟುಂಬಸ್ಥರ ಎದುರೇ ಆತ್ಮಹತ್ಯೆಗೆ ಶರಣಾದ ಜೋಡಿ

ಪ್ರೀತಿ ಮಾಡ್ತಿದ್ದ ಜೋಡಿಗೆ ಕುಟುಂಬಸ್ಥರ ವಿರೋಧ ವ್ಯಕ್ತವಾಗಿದ್ದು, ಅವರಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋಗಿದ್ದರು. ಇದರ ಮಧ್ಯೆ ನಿನ್ನೆ ಸಂಜೆ ಹುಡುಗಿ ಕುಟುಂಬದ ಸದಸ್ಯರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Lovers jumped into the well
Lovers jumped into the well

By

Published : Mar 29, 2022, 8:21 PM IST

ನಾಗ್ಪುರ(ಮಹಾರಾಷ್ಟ್ರ):ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಎರಡೂ ಮನೆಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಓಡಿ ಹೋಗಿದ್ದ ಪ್ರೇಮಿಗಳು ಕುಟುಂಬಸ್ಥರ ಸಮ್ಮುಖದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗ್ಪುರದ ವಾರ್ಧಾದಲ್ಲಿ ನಡೆದಿದೆ.

ಕುಟುಂಬಸ್ಥರ ಎದುರೇ ಆತ್ಮಹತ್ಯೆಗೆ ಶರಣಾದ ಜೋಡಿ

ಏನಿದು ಪ್ರಕರಣ?:26 ವರ್ಷದ ಯುವಕ ಮಹೇಶ್​ ಹಾಗೂ 16 ವರ್ಷದ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಯವರ ವಿರೋಧ ವ್ಯಕ್ತವಾಗುತ್ತಿದ್ದಂತೆ ಇಬ್ಬರು ಓಡಿ ಡಿಸೆಂಬರ್​ 25ರಂದು ಓಡಿ ಹೋಗಿದ್ದರು. ನಿನ್ನೆ ಸಮುದ್ರಾಪುರ ಪೊಲೀಸ್ ಠಾಣೆಯ ರಸ್ತೆವೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಟುಂಬಸ್ಥರ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದ ಟೆಂಪೋ: ಕಂದಮ್ಮ ಸ್ಥಳದಲ್ಲೇ ಸಾವು, ವಿಡಿಯೋ ನೋಡಿ

ಮಹೇಶ್ ಸಮುದ್ರಾಪುರದಲ್ಲಿ ವಾಸವಾಗಿದ್ದು, ದನಗಾಹಿ ಕೆಲಸ ಮಾಡುತ್ತಿದ್ದನು. ಉಮ್ರೇಡ್​​ನ ಬೇಲಾದಲ್ಲಿ ವಾಸವಾಗಿದ್ದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಪರಿಚಯವಾಗಿದ್ದು, ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಇವರ ಪ್ರೀತಿಯನ್ನ ಮನೆಯವರು ಅರ್ಥ ಮಾಡಿಕೊಳ್ಳದ ಕಾರಣ ಮನೆ ಬಿಟ್ಟು ಓಡಿ ಹೋಗಿದ್ದರು. ಸೋಮವಾರ ಸಂಜೆ ಇಬ್ಬರು ಹುಡುಗಿಯ ಕುಟುಂಬಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಯಾವುದೇ ರೀತಿಯ ಯೋಚನೆ ಮಾಡದೇ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಮಾಹಿತಿ ಪಡೆದುಕೊಂಡು ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಇಬ್ಬರ ಮೃತದೇಹ ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದಾರೆ.

ABOUT THE AUTHOR

...view details