ಜೋಧ್‌ಪುರ(ರಾಜಸ್ಥಾನ): ರಾಜಸ್ಥಾನದ ಜೋಧ್‌ಪುರದಲ್ಲಿ ತನ್ನ ಪ್ರೇಯಸಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೈಪುರ ಮೂಲದ ಸಮೀರ್ ಎಂಬಾತ ಆರೋಪಿ. ಯುವತಿಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಮಾದಕ ದ್ರವ್ಯ ಸೇವನೆ ಆಕೆಯ ಸಾವಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯೊಂದಿಗೆ ಕಳೆದ ಐದು ವರ್ಷಗಳಿಂದ ಸಂಬಂಧ ಹೊಂದಿದ್ದನಂತೆ. ಇಬ್ಬರೂ ಮದುವೆಯಾಗಬೇಕು ಎಂದು ಬಯಸಿದ್ದು, ಆದರೆ ಕುಟುಂಬದವರು ಇದನ್ನು ವಿರೋಧಿಸಿದ್ದ ಕಾರಣ ಮದುವೆಯಾಗಿರಲಿಲ್ಲ. ಸಮೀರ್ ಶನಿವಾರ ಯುವತಿಯನ್ನು ಜೋಧ್‌ಪುರದ ಹೋಟೆಲ್‌ಗೆ ಕರೆಸಿಕೊಂಡು ಅಲ್ಲಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಪ್ರಜ್ಞಾಹೀನಳಾದಾಗ ಸಮೀರ್ ಹೆದರಿ ಯುವತಿಯನ್ನು ಸಹೋದರಿಯನ್ನು ಹೋಟೆಲ್‌ಗೆ ಕರೆಸಿ ಸಂತ್ರಸ್ತೆಯನ್ನು ಆಕೆಯೊಂದಿಗೆ ಆಸ್ಪತ್ರೆಗೆ ಕಳುಹಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೂರ್ವ ಡಿಸಿಪಿ ಅಮೃತಾ ದುಹಾನ್ ಮಾಹಿತಿ ನೀಡಿದರು.
ಸಂತ್ರಸ್ತೆಯ ಸಹೋದರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯನ್ನು ಪೌಟಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಆಕೆಯನ್ನು ಎಂಜಿಹೆಚ್‌ಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಸಮೀರ್ ಜೈಪುರದಿಂದ ರೈಲಿನಲ್ಲಿ ಹೊರಟು ರಾತ್ರಿ 7.30ಕ್ಕೆ ವಿಶಾಖಪಟ್ಟಣಂ ಎಕ್ಸ್ಪ್ರೆಸ್ ಹತ್ತಿದ್ದಾನೆ.