ಕರ್ನಾಟಕ

karnataka

ETV Bharat / bharat

ಪ್ರೀತಿಸಿ ಕೈಕೊಟ್ಟ ಯುವಕ ; ಮನನೊಂದು 5 ಜನ ಸ್ನೇಹಿತೆಯರೊಂದಿಗೆ ವಿಷ ಸೇವಿಸಿದ ಬಾಲಕಿ, ಮೂವರು ಸಾವು - ಸ್ನೇಹಿತರೊಂದಿಗೆ ವಿಷ ಸೇವಿಸಿದ ಬಾಲಕಿ

ಮದುವೆ ಮಾಡಿಕೊಳ್ಳಲು ಯುವಕನೋರ್ವ ಹಿಂದೇಟು ಹಾಕಿದ್ದರಿಂದ ಬಾಲಕಿ ತನ್ನ ಐವರು ಸ್ನೇಹಿತೆಯರೊಂದಿಗೆ ವಿಷ ಸೇವನೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ನಡೆದಿದೆ..

lover commit suicide With his friend
lover commit suicide With his friend

By

Published : Apr 9, 2022, 3:57 PM IST

Updated : Apr 9, 2022, 4:15 PM IST

ಔರಂಗಾಬಾದ್​(ಮಹಾರಾಷ್ಟ್ರ) :ಪ್ರೀತಿಸಿ ಮದುವೆ ಮಾಡಿಕೊಳ್ಳಲು ಯುವಕನೋರ್ವ ನಿರಾಕರಣೆ ಮಾಡಿದ್ದಕ್ಕಾಗಿ ಆರು ಗೆಳೆತಿಯರು ಒಟ್ಟಿಗೆ ವಿಷ ಸೇವಿಸಿದ್ದಾರೆ. ಇದರಲ್ಲಿ ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಏನಿದು ಪ್ರಕರಣ? :ಆರು ಮಂದಿ ಬಾಲಕಿಯರ ಪೈಕಿ ಓರ್ವಳು ಸ್ವಂತ ಸಂಬಂಧಿ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ, ಮದುವೆ ಮಾಡಿಕೊಳ್ಳಲು ಆತ ನಿರಾಕರಣೆ ಮಾಡಿದ್ದಾನೆ. ಇದರಿಂದ ಮನನೊಂದು ವಿಷ ಸೇವನೆ ಮಾಡಿದ್ದಾಳೆ. ಇದರ ಬೆನ್ನಲ್ಲೇ ಐವರು ಮಹಿಳಾ ಸ್ನೇಹಿತೆಯರು ಕೂಡ ವಿಷ ಸೇವಿಸಿದ್ದಾರೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಮೂವರನ್ನ ಮಗದ್ ವೈದ್ಯಕೀಯ ಕಾಲೇಜ್​ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಪತ್ನಿಯನ್ನೇ ಕೊಂದ ಪತಿ!

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಾಹಿತಿ ನೀಡಿದ್ದು, ಪ್ರಕರಣ ತುಂಬಾ ಗಂಭೀರವಾಗಿದೆ. ಬಾಲಕಿಯೋರ್ವಳು ತನ್ನ ಸಂಬಂಧಿ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಮದುವೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ,ಇದಕ್ಕೆ ಆತ ನಿರಾಕರಣೆ ಮಾಡಿದ್ದಾನೆ. ಇದರ ಬೆನ್ನಲ್ಲೇ ಹುಡುಗಿ ವಿಷ ಸೇವನೆ ಮಾಡಿದ್ದಾಳೆ. ಇದನ್ನ ನೋಡಿರುವ ಇತರೆ ಬಾಲಕಿಯರು ಒಬ್ಬೊಬ್ಬರಾಗಿ ವಿಷ ಸೇವಿಸಿದ್ದಾರೆಂದು ಔರಂಗಾಬಾದ್​ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಎಲ್ಲ ಬಾಲಕಿಯರ ವಯಸ್ಸು 12ರಿಂದ 16 ವರ್ಷಗಳು ಎಂದು ತಿಳಿದು ಬಂದಿದೆ. ಎಲ್ಲರೂ ಒಂದೇ ಗ್ರಾಮದಲ್ಲಿ ವಾಸವಾಗಿದ್ದರು. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Last Updated : Apr 9, 2022, 4:15 PM IST

ABOUT THE AUTHOR

...view details