ಸಿಮಡೇಗಾ (ಜಾರ್ಖಂಡ್): ಜಾರ್ಖಂಡ್ನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂಯೇತರ ಯುವಕನೊಬ್ಬ ತನ್ನ ಹೆಸರು ಮರೆಮಾಚಿಕೊಂಡು ಯುವತಿಯೊಂದಿಗೆ ಐದು ವರ್ಷಗಳಿಂದ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದು, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಸಿಮಡೇಗಾ ಜಿಲ್ಲೆಯ ಮಾತ್ರಮೇಟಾ ನಿವಾಸಿ ಹಿಂದೂಯೇತರ ಯುವಕ ಕೃತ್ಯ ಎಂದು ಸಂತ್ರಸ್ತ ಯುವತಿ ಟೈಪೈತಾಂಗರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹಿಂದೂ ಯುವಕನ ಹೆಸರು ಹೇಳಿಕೊಂಡು ಆರೋಪಿ ಪರಿಚಯವಾಗಿದ್ದ. ಆತನೊಂದಿಗೆ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದಾಗ ಕಳೆದ ಐದು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಾನು ಗರ್ಭಿಣಿ ಎಂದು ತಿಳಿದಾಗ ಮದುವೆಯಾಗಲು ನಿರಾಕರಿಸಿ, ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.