ಲಕ್ನೋ:ಉತ್ತರಪ್ರದೇಶದ ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲವ್ ಜಿಹಾದ್ ಆರೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕ ವಿದ್ಯಾರ್ಥಿನಿಗೆ ಬಹಳ ದಿನಗಳಿಂದ ಕಿರುಕುಳ ನೀಡುತ್ತಿದ್ದನಲ್ಲದೆ, ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಕುಟುಂಬ ಸದಸ್ಯರೊಂದಿಗೆ ಯುವಕನ ಬಗ್ಗೆ ಹೇಳಲು ಆತನ ಮನೆಗೆ ಹೋಗಿದ್ದಾರೆ.
ಈ ವೇಳೆ ಆರೋಪಿ ಯುವಕ ಮತ್ತು ಆತನ ತಂದೆ ವಿದ್ಯಾರ್ಥಿನಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕಿಯನ್ನು ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ಕಳುಹಿಸಿದ್ದು, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿನಿ ಸ್ವತಃ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಈ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಯುಪಿಯಲ್ಲಿ ಭಯಾನಕ ಘಟನೆ: ತುಂಡು ತುಂಡಾಗಿ ಕತ್ತರಿಸಿ ಯುವತಿಯ ಬರ್ಬರ ಹತ್ಯೆ
ಆರೋಪಿ ಸುಫಿಯಾನ್ ಕಳೆದ ಹಲವು ತಿಂಗಳಿಂದ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯನ್ನು ನಿತ್ಯ ಚುಡಾಯಿಸುತ್ತಿದ್ದ, ಮಗಳು ಹೊರಗೆ ಹೋದಾಗ ಅಥವಾ ಶಾಲೆಗೆ ಹೋದಾಗಲೆಲ್ಲಾ ಸೂಫಿಯಾನ್ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಈ ಕಿರುಕುಳದಿಂದ ಬೇಸತ್ತು ಆಕೆ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇನ್ಸ್‌ಪೆಕ್ಟರ್ ದುಬಗ್ಗಾ ಸುಖವೀರ್ ಸಿಂಗ್ ಭದೌರಿಯಾ ಹೇಳಿದ್ದಾರೆ.
ಧರ್ಮ ಬದಲಾವಣೆಗೆ ಸಂಬಂಧಿಸಿದಂತೆ ಸುಫಿಯಾನ್ ಹಲವು ದಿನಗಳಿಂದ ಮಗಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಮೃತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಅವರ ಮನೆಗೆ ಹೋದಾಗ ಸುಫಿಯಾನ್ ಮತ್ತು ಆತನ ತಂದೆ ಆಕೆಯನ್ನು ಕೆಳಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ವಿದ್ಯಾರ್ಥಿನಿಯೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ಸೂಫಿಯಾನ್ ಹೇಳುತ್ತಾರೆ.