ಪುಣೆ(ಮಹಾರಾಷ್ಟ್ರ): ನಮ್ಮ ಪ್ರೀತಿ ಪಾತ್ರರನ್ನು ಮದುವೆಯಾಗಲು ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಎಲ್ಜಿಬಿಟಿ (ಸಲಿಂಗಿಗಳು) ಗುಂಪುಗಳಿಂದ ಇಂದು ಪುಣೆಯಲ್ಲಿ ಪ್ರೈಡ್ ರ್‍ಯಾಲಿಯನ್ನು ಆಯೋಜಿಸಲಾಗಿತ್ತು.
ಇಂದು ಪುಣೆಯಲ್ಲಿ ಎಲ್ಜಿಬಿಟಿ ಸಮುದಾಯದಿಂದ ಹೆಮ್ಮೆಯ ನಡಿಗೆ ಎಂಬ ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಪುಣೆಯ ಛತ್ರಪತಿ ಸಂಭಾಜಿ ಮಹಾರಾಜ್ ಗಾರ್ಡನ್‌ನಿಂದ ರ್‍ಯಾಲಿ ಆರಂಭವಾಯಿತು. ಡೆಕ್ಕನ್‌ಗೆ ಕಡೆಯಿಂದ ಛತ್ರಪತಿ ಸಂಭಾಜಿ ಮಹಾರಾಜ್ ಬಾಗ್‌ನೊಂದಿಗೆ ರ್‍ಯಾಲಿ ಕೊನೆಗೊಂಡಿದೆ.
ರ್‍ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಇವರನ್ನು ಪ್ರತಿನಿಧಿಸುವ ದೊಡ್ಡ ಧ್ವಜವನ್ನೂ ಹಿಡಿದಿದ್ದರು. ಎಲ್ಜಿಬಿಟಿ ಸಮುದಾಯದ ಬಗ್ಗೆ ಸಮಾಜದ ಮನೋಭಾವ ಬದಲಾಗಬೇಕು, ಅವರನ್ನು ಸಮಾನವಾಗಿ ಪರಿಗಣಿಸಬೇಕು. ಸೆಕ್ಷನ್ 377 ರ ರದ್ದತಿ ಹೊರತಾಗಿಯೂ, ಆ ಹಕ್ಕುಗಳನ್ನು ನಾವು ಹೊಂದಿಲ್ಲ. ಎಲ್‌ಜಿಬಿಟಿ ಸಮುದಾಯವನ್ನು ಸಮಾಜವು ದ್ವೇಷಿಸುವುದನ್ನು ತಡೆಯಲು ಈ ರ್‍ಯಾಲಿಯನ್ನು ಆಯೋಜಿಸಲಾಗಿದೆ ಎನ್ನುವುದು ಈ ಸಮುದಾಯವರ ಅಭಿಪ್ರಾಯ.