ನಿಜಾಮಾಬಾದ್, ತೆಲಂಗಾಣ: ಪ್ರೇಮಿಗಳಿಬ್ಬರು ಕಾಡಿನೊಳಗೆ ಆತ್ಮಹತ್ಯೆ ಮಾಡಿಕೊಂಡ 15 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಜಿಲ್ಲೆಯ ವರ್ನಿ ಮಂಡಲಂನಲ್ಲಿರುವ ಶಿವಾರು ಎಂಬಲ್ಲಿರುವ ಅರಣ್ಯ ಪ್ರದೇಶದಲ್ಲಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೊಸ್ರಾ ಮಂಡಲಂನ ತಿಮ್ಮಾಪುರ ಗ್ರಾಮಕ್ಕೆ ಸೇರಿದ ಮೋಹನ್ ಮತ್ತು ಕಾಮರೆಡ್ಡಿ ಜಿಲ್ಲೆಯ ನಿಜಾಂನಗರ್ ಮಂಡಲಂಗೆ ಸೇರಿದ ಲಕ್ಷ್ಮೀ ಎಂದು ಗುರ್ತಿಸಲಾಗಿದೆ.