ಕರ್ನಾಟಕ

karnataka

ETV Bharat / bharat

ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ - Etv bharat kannada

ತಂದೆಯೊಬ್ಬ ತನ್ನ ಮಗಳು ಮತ್ತು ಆಕೆಯ ಪತಿಯನ್ನು ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆರೋಪಿ ಮುತ್ತುಕುಟ್ಟಿ ಮಗಳು ವಿರೋಧದ ನಡುವೆಯೂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದೇ ಈ ಹತ್ಯೆಗೆ ಕಾರಣ ಎನ್ನಲಾಗ್ತಿದೆ.

ಕೊಲೆಯಾದ ಪ್ರೇಮಿಗಳು
ಕೊಲೆಯಾದ ಪ್ರೇಮಿಗಳು

By

Published : Jul 26, 2022, 3:52 PM IST

Updated : Jul 26, 2022, 4:33 PM IST

ತೂತುಕುಡಿ (ತಮಿಳುನಾಡು):ಮಗಳು ಪ್ರೀತಿಸಿ ಓಡಿ ಹೋಗಿ ತನಗೆ ಇಷ್ಟವಿಲ್ಲದ ಯುವಕನೊಂದಿಗೆ ಮದುವೆಯಾದಳು ಎಂಬ ಕೋಪಕ್ಕೆ, ತಂದೆಯೇ ಅವಳನ್ನು ಮತ್ತು ಹುಡುಗನನ್ನು ಕೊಲೆ ಮಾಡಿರುವ ಘಟನೆ ತೂತುಕುಡಿ ಜಿಲ್ಲೆಯ ಎಟ್ಟಾಯಪುರಂ ಬಳಿ ನಡೆದಿದೆ. ಮುತ್ತುಕುಟ್ಟಿ (50) ಕೊಲೆ ಮಾಡಿದ ವ್ಯಕ್ತಿ. ಇವರ ಮಗಳು ರೇಷ್ಮಾ (20), ಮಾಣಿಕರಾಜ್ (26) ಕೊಲೆಯಾದ ದುರ್ದೈವಿಗಳು.

ಆರೋಪಿ ಮುತ್ತುಕುಟ್ಟಿ

ತೂತುಕುಡಿಯಲ್ಲಿನ ಕೋವಿಲ್‌ಪಟ್ಟಿಯಲ್ಲಿರುವ ಕಾಲೇಜಿನಲ್ಲಿ ರೇಷ್ಮಾ ಓದುತ್ತಿದ್ದರು. ಅವಳು ತನ್ನ ಏರಿಯಾದ ಮಾಣಿಕರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ರೇಷ್ಮಾ ಮತ್ತು ಮಾಣಿಕರಾಜ್ ಪ್ರೀತಿಗೆ ತಂದೆ ಮುತ್ತುಕುಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಕೆಲ ದಿನಗಳ ಹಿಂದೆ ಇವರಿಬ್ಬರು ಊರು ತೊರೆದು ಮದುವೆಯಾಗಿದ್ದರು ಎನ್ನಲಾಗಿದೆ.

2 ದಿನಗಳ ಹಿಂದೆ (ಶನಿವಾರ) ಇಬ್ಬರೂ ಊರಿಗೆ ಮರಳಿದ್ದರು. ಇಬ್ಬರು ಗ್ರಾಮಕ್ಕೆ ಬಂದ ನಂತರ ತಂದೆ-ತಾಯಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಗಳು ಮದುವೆಯಾಗಿರುವುದನ್ನು ತಿಳಿದ ಮುತ್ತುಕುಟ್ಟಿ ಕೋಪಗೊಂಡಿದ್ದ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ರೇಷ್ಮಾ ಮತ್ತು ಆಕೆಯ ಪತಿ ಮನೆಯಲ್ಲಿದ್ದಾಗ ಮುತ್ತುಕುಟ್ಟಿ ಅಲ್ಲಿಗೆ ಬಂದು ಇಬ್ಬರನ್ನೂ ಕತ್ತಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ವಿರೋಧದ ನಡುವೆಯೂ ಮದುವೆಯಾದ ಜೋಡಿ

ಈ ಘಟನೆ ಬಗ್ಗೆ ಮಾಹಿತಿ ಪಡೆದ ಎಟ್ಟಾಯಪುರಂ ಪೊಲೀಸರು ಸ್ಥಳಕ್ಕಾಗಮಿಸಿ, ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂರು ಗಂಟೆಯೊಳಗೆ ಮುತ್ತುಕುಟ್ಟಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಅಸ್ವಸ್ಥಗೊಂಡ ಲಂಗೂರಗೆ ಒಆರ್‌ಎಸ್‌ ನೀಡಿ ಮಾನವೀಯತೆ ಮೆರೆದ ಪೊಲೀಸರು​​: ​​ವಿಡಿಯೋ


Last Updated : Jul 26, 2022, 4:33 PM IST

ABOUT THE AUTHOR

...view details