ಖಗಾರಿಯಾ(ಬಿಹಾರ) :41 ವರ್ಷದ ನಾಲ್ಕು ಮಕ್ಕಳ ತಾಯಿ, 21 ವರ್ಷದ ಯುವಕನನ್ನು ಪ್ರೇಮಿಸಿ ಮದುವೆಯಾಗಿರುವ ಘಟನೆ ಜಿಲ್ಲೆಯ ಪರಬಟ್ಟಾ ಬ್ಲಾಕ್ ವ್ಯಾಪ್ತಿಯ ದರಿಯಾಪುರದಲ್ಲಿ ನಡೆದಿದೆ. ಸದ್ಯ ಇವರ ಈ ವಿವಾಹ ಭಾರಿ ಚರ್ಚೆಗೆ ಗ್ರಾಸವಾಗಿದೆ.
21 ರ ಯುವಕನ ಕೈ ಹಿಡಿದ ನಾಲ್ಕು ಮಕ್ಕಳ ತಾಯಿ ಮನಟ್ಟಿ ದೇವಿ ಎಂಬ ಮಹಿಳೆ ರವಿಕುಮಾರ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದು, ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ, ಮಹಿಳೆಯರ ಸಂಬಂಧಿಕರೇ ಮುಂದೆ ನಿಂತು ಯುವಕನೊಂದಿಗೆ ವಿವಾಹ ಮಾಡಿಸಿದ್ದಾರೆ.
ಜೋರಾವರಪುರ ಪಂಚಾಯತ್ ವ್ಯಾಪ್ತಿಯ 21 ವರ್ಷದ ರವಿಕುಮಾರ್, ವಿಧವೆಯಾಗಿರುವ ಮನಟ್ಟಿ ದೇವಿ ಜತೆ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಭಾರಿ ಪ್ರವಾಹ ಬಂದು ಮನಟ್ಟಿದೇವಿಯವರ ಮನೆ ಕೊಚ್ಚಿ ಹೋಗಿತ್ತು. ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ರವಿಕುಮಾರ್, ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಮನಟ್ಟಿದೇವಿಯವರನ್ನು ಭೇಟಿಯಾಗುತ್ತಿದ್ದನಂತೆ.
ಭಾನುವಾರ ಸಂಜೆ (ಆಗಸ್ಟ್ 15) ಇಬ್ಬರೂ ಲೈಂಗಿಕತೆಯಲ್ಲಿ ತೊಡಗಿದ್ದ ವೇಳೆ, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥರು ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮಹಿಳೆಗೆ ನಾಲ್ವರು ಗಂಡು ಮಕ್ಕಳಿದ್ದು, ಈ ಪೈಕಿ ಇಬ್ಬರನ್ನು ತಮ್ಮ ಜತೆ ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನಿಬ್ಬರನ್ನು ಅಜ್ಜಿಯ ಜತೆ ಇರಿಸುವುದಾಗಿ ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಇಂಟೀರಿಯರ್ ಡಿಸೈನರ್‌ನಿಂದ ಅತ್ಯಾಚಾರ ಯತ್ನ, ಜೀವ ಬೆದರಿಕೆ: ಪೊಲೀಸರಿಗೆ ದೂರು ನೀಡಿದ ನಟಿ