ಕರ್ನೂಲ್ (ಆಂಧ್ರಪ್ರದೇಶ):ಜಿಲ್ಲೆಯಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಗೆಳತಿಯರ ಮಧ್ಯೆ ಪ್ರೀತಿ ಚಿಗುರೊಡೆದು ಅದು ಹೆಮ್ಮರವಾಗಿ ಬೆಳೆದಿದೆ. ಈ ವೇಳೆ ಇಬ್ಬರು ಮನೆ ತೊರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಸಂತೋಷ ನಗರದ 21ರ ಹರೆಯದ ಯುವತಿ ಮತ್ತು ನರಸಿಂಹಾರೆಡ್ಡಿ ನಗರದ 20ವರ್ಷ ವಯಸ್ಸಿನ ಯುವತಿ ಮನೆ ಬಿಟ್ಟೋದವರು. ಇವರಿಬ್ಬರು ಬಾಲ್ಯದಿಂದಲೇ ಗೆಳತಿಯರು. ಅವರ ಮಧ್ಯೆ ಇರುವ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಮನೆಯವರಿಂದ ತಮ್ಮ ಪ್ರೀತಿಗೆ ಬೆಂಬಲ ಸಿಗದು ಎಂದು ಅರಿತ ಯುವತಿಯರು ನ.3ರಂದು ಮನೆ ಬಿಟ್ಟು ಹೋಗಿದ್ದಾರೆ.