ನಾಂದೇಡ್(ಮಹಾರಾಷ್ಟ್ರ):ಹಿಂದೂ-ಮುಸ್ಲಿಂ ಅಥವಾ ಇತರೆ ಸಮುದಾಯಗಳ ಸಮಾರಂಭ ನಡೆಯುವ ಸಂದರ್ಭದಲ್ಲಿ ದೇಗುಲ, ಮಸೀದಿ, ಚರ್ಚ್ಗಳಲ್ಲಿ ದೊಡ್ಡ ದೊಡ್ಡ ಧ್ವನಿವರ್ಧಕ ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಕಳೆದ ಕೆಲ ದಿನಗಳಿಂದ ದೇಶದಲ್ಲಿ ಇದೇ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಆದರೆ, ಇಲ್ಲೊಂದು ಗ್ರಾಮ ಎಲ್ಲರಿಗೂ ಮಾದರಿಯಾಗುವಂತಹ ನಿರ್ಧಾರ ಕೈಗೊಂಡಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಳೆದ ಐದು ವರ್ಷಗಳಿಂದ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲಾಗಿದೆ. ಬರಾದ್ ಗ್ರಾಮದಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲದೇ ಗ್ರಾಮಸ್ಥರು ಸರ್ವಾನುಮತದ ಈ ನಿರ್ಣಯ ಕೈಗೊಂಡಿದ್ದಾರೆ. 2017ರ ಜನವರಿ 30ರಿಂದ ಇಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಕೇಳಿಸಿಲ್ಲ.
ದೇವಾಲಯದ ಮೇಲೂ ಧ್ವನಿವರ್ಧಕ ನಿಷೇಧ ಇದನ್ನೂ ಓದಿ:ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಅಸಿಸ್ಟೆಂಟ್ ಇಂಜಿನಿಯರ್ ಎದೆಗೆ ಒದ್ದ ವ್ಯಕ್ತಿ! ವಿಡಿಯೋ
ಅತಿ ದೊಡ್ಡ ಗ್ರಾ.ಪಂ. ಆಗಿರುವ ಬರಾದ್ನಲ್ಲಿ ಎಲ್ಲ ಜಾತಿ, ಧರ್ಮದ 10 ಸಾವಿರ ಜನರು ವಾಸ ಮಾಡ್ತಿದ್ದಾರೆ. ಈ ಹಿಂದೆ ಧ್ವನಿವರ್ಧಕ ಬಳಕೆ ವಿಚಾರವಾಗಿ ವಿವಾದ ಏರ್ಪಟ್ಟಿತ್ತು. 2017ರಲ್ಲಿ ಗ್ರಾಮಸ್ಥರು ಸಭೆ ನಡೆಸಿ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ತೀರ್ಮಾನ ಕೈಗೊಳ್ಳುತ್ತಾರೆ. ಅಂದಿನಿಂದಲೂ ನಿಷೇಧ ಮುಂದುವರೆದಿದೆ.
ಗ್ರಾಮದಲ್ಲಿರುವ ಮಸೀದಿಯಲ್ಲಿ ಆಜಾನ್ ನಿಷೇಧ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವಾತಾವರಣ: ಗ್ರಾಮದಲ್ಲಿ ಧ್ವನಿವರ್ಧಕ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಓದಲು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ, ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಲು ಸಹಕಾರಿಯಾಗಿದೆ. ಜೊತೆಗೆ ಶಬ್ದ ಮಾಲಿನ್ಯ ಸಹ ಇಲ್ಲ. ಈ ಗ್ರಾಮದಲ್ಲಿ 8 ಹಿಂದೂ ದೇವಾಲಯಗಳಿದ್ದು, 1 ಮಸೀದಿ ಹಾಗೂ ಬೌದ್ಧರ ಎರಡು ಮಠಗಳಿವೆ.
ಧಾರ್ಮಿಕ ಸ್ಥಳಗಳ ಜೊತೆಗೆ ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಸಹ ಧ್ವನಿವರ್ಧಕ ಬಳಕೆ ಮೇಲೆ ನಿರ್ಬಂಧ ಹೇರಲಾಗಿದೆ.