ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಶೂನ್ಯ ಸುತ್ತಿದ ಬಿಜೆಪಿ.. ರಾಜಕೀಯ ಜೀವನದಲ್ಲಿ ಹಳಿ ತಪ್ಪಿದ ಮೆಟ್ರೋಮ್ಯಾನ್​

ದೇವರ ನಾಡು ಕೇರಳದಲ್ಲಿ ಕಮಲ ಅರಳಿಸುವ ಉದ್ದೇಶ ಇಟ್ಟುಕೊಂಡಿದ್ದ ಭಾರತೀಯ ಜನತಾ ಪಾರ್ಟಿಗೆ ಇದೀಗ ಮತ್ತೊಮ್ಮೆ ಮುಖಭಂಗವಾಗಿದೆ. ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಯಶಸ್ವಿಯಾಗಿಲ್ಲ.

By

Published : May 2, 2021, 9:09 PM IST

Lotus fails to bloom in Kerala
Lotus fails to bloom in Kerala

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಮೂರು ಕ್ಷೇತ್ರಗಳಲ್ಲಿ ಪ್ರಬಲ ಹೋರಾಟ ನಡೆಸಿದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ನಿರಾಸೆಗೊಳಗಾಗಿದೆ.

2016ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ, ಈ ಸಲ ಮತ್ತಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿದೆ ವಿಶ್ವಾಸ ಇಟ್ಟುಕೊಂಡಿತ್ತು. ಆದರೆ ಯಾವುದೇ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ದೇವರ ನಾಡಲ್ಲಿ ಬಿಜೆಪಿ ಅರಳುವ ಕನಸು ಮತ್ತೊಮ್ಮೆ ಮರೀಚಿಕೆಯಾಗಿದೆ.

ಎಡ ಪಕ್ಷಗಳಾದ ಯುಡಿಎಫ್ ಹಾಗೂ ಎಲ್​ಡಿಎಫ್​ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ವಿಶೇಷವೆಂದರೆ ಈ ಸಲ ಕೇರಳದಲ್ಲಿ ಕಮಲ ಅರಳಿಸುವ ಉದ್ದೇಶದಿಂದಲೇ ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್​ ಅವರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಅವರು ಸ್ಪರ್ಧಿಸಿ ಪಲಕ್ಕಾಡ್​​ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಜತೆಗೆ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್​ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋತು ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮ​ದಲ್ಲಿ ಶಿಷ್ಯನೆದುರು ಸೋಲುಂಡ ಮಮತಾ.. ಸುವೇಂದು ಅಧಿಕಾರಿಗೆ ಜಯ

2016ರ ವಿಧಾನಸಭೆ ಚುನಾವಣೆ ವೇಳೆ ಕೇಂದ್ರದ ಮಾಜಿ ಸಚಿವ ಒ. ರಾಜಗೋಪಾಲ್​ ತಿರುವನಂತಪುರಂ ಜಿಲ್ಲೆಯ ನೊಮೊಮ್​ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಈ ಬಾರಿ ಬಿಜೆಪಿಯ ಯಾವುದೇ ಅಭ್ಯರ್ಥಿ ಗೆಲುವು ಕಂಡಿಲ್ಲ. 140 ಕ್ಷೇತ್ರಗಳ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್​ಡಿಎಫ್​​+ 97, ಯುಡಿಎಫ್​​+​​ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಭಾರತೀಯ ಜನತಾ ಪಾರ್ಟಿ ಯಾವುದೇ ಕ್ಷೇತ್ರದಲ್ಲೂ ಜಯ ಸಾಧಿಸಿಲ್ಲ.

ABOUT THE AUTHOR

...view details