ಚೆನ್ನೈ(ತಮಿಳುನಾಡು): ಲಾರಿ ಟೈಯರ್ಗೆ ಪಂಕ್ಚರ್ ಹಾಕುವಾಗ ದಿಢೀರ್ ಸ್ಫೋಟಗೊಂಡಿರುವ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಟೈಯರ್ ಸ್ಫೋಟಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ ಚೆನ್ನೈನ ತಾಂಬರಂನಿಂದ ಕಿಷ್ಕಿಂದಾ ಅಮ್ಯೂಸ್ಮೆಂಟ್ ಪಾರ್ಕ್ಗೆ ಹೋಗುವ ರಸ್ತೆಯಲ್ಲಿನ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಪ್ರಕಾಶ್(40) ದುರ್ಮರಣಕ್ಕೀಡಾಗಿದ್ದಾನೆ. ಈತ ಮೂಲತಃ ಮಣಿಮಂಗಲಂ ಪ್ರದೇಶದವನು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಲಾರಿ ಟೈಯರ್ಗೆ ಪಂಕ್ಚರ್ ಹಾಕುತ್ತಿದ್ದ ವೇಳೆ ಅದರಲ್ಲಿ ಗಾಳಿ ಹೆಚ್ಚಾಗಿ ತುಂಬಿರುವ ಕಾರಣ ಏಕಾಏಕಿ ಸ್ಫೋಟಗೊಂಡಿದ್ದು, ಅದರ ರಭಸಕ್ಕೆ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇತರೆ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ಬುರ್ಖಾ ಧರಿಸಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿದ ನಟಿ ಸಾಯಿ ಪಲ್ಲವಿ!
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಈಗಾಗಲೇ ಮೃತದೇಹ ವಶಕ್ಕೆ ಪಡೆದುಕೊಂಡಿದ್ದು, ಶವಪರೀಕ್ಷೆಗಾಗಿ ಕ್ರೋಮ್ಪೇಟೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಯ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ರಿಲೀಸ್ ಆಗಿದೆ.