ಮೆಟ್ಟುಪಾಳ್ಯಂ(ತಮಿಳುನಾಡು):ವೇಗವಾಗಿ ಬಂದ ಲಾರಿವೊಂದು ತಮಿಳುನಾಡು ಸರ್ಕಾರಿ ಸಾರಿಗೆ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರ್ಕಾರಿ ಬಸ್ಗೆ ಡಿಕ್ಕಿ ಹೊಡೆದ ಲಾರಿ.. ಇಂದು ಬೆಳಗ್ಗೆ ಮೆಟ್ಟುಪಾಳ್ಯಂನಿಂದ ಸತ್ಯಮಂಗಲಕ್ಕೆ ಪ್ರಯಾಣಿಕರನ್ನ ಹೊತ್ತು ಸರ್ಕಾರಿ ಬಸ್ ತೆರಳುತ್ತಿತ್ತು. ಈ ವೇಳೆ ರಭಸವಾಗಿ ಬಂದಿರುವ ಲಾರಿ ಅದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಪಲ್ಟಿಯಾಗಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿರಿ:ನಾಯಿ ಮತ್ತು ನಿಯತ್ತು: ಮಾಲೀಕನ ಪ್ರಾಣ ಉಳಿಸಲು ಸರ್ಪದೊಂದಿಗೆ ಸೆಣಸಾಡಿ ಪ್ರಾಣ ತೆತ್ತ ಶ್ವಾನ!
ಘಟನೆ ನಡೆಯುತ್ತಿದ್ದಂತೆ ತಕ್ಷಣವೇ ಸ್ಥಳೀಯರು ಪ್ರಯಾಣಿಕರ ಸಹಾಯಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ ಏಳು ಪ್ರಯಾಣಿಕರು ಹಾಗೂ ಲಾರಿ ಚಾಲಕ ಸಹ ಗಾಯಗೊಂಡಿದ್ದಾನೆ. ಈಗಾಗಲೇ ಎಲ್ಲರನ್ನೂ ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಚಾಲಕ, ಕಂಡಕ್ಟರ್ ಸಹ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಸರ್ಕಾರಿ ಬಸ್-ಲಾರಿ ಮಧ್ಯೆ ಭೀಕರ ಅಪಘಾತ ಘಟನೆಯಿಂದಾಗಿ ಮೆಟ್ಟುಪಾಳ್ಯಂ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ಕೆಲ ಹೊತ್ತು ತೊಂದರೆ ಅನುಭವಿಸಿದರು. ಈ ವೇಳೆ, ಪಲ್ಟಿಯಾದ ಬಸ್ ತೆರವುಗೊಳಿಸಿದ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.