ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಏಕತಾ ಪ್ರತಿಮೆಗಿಂತ ದೊಡ್ಡದಾದ ಶ್ರೀರಾಮನ ಬಿಂಬ! - Etv bharat kannada

ಅಯೋಧ್ಯೆಯಲ್ಲಿ ಅವತಾರ ಪುರುಷ ಶ್ರೀರಾಮನ ಬೃಹತ್ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಅತಿದೊಡ್ಡ ರಾಮನ ಪ್ರತಿಮೆಯೂ ಶೀಘ್ರದಲ್ಲಿ ಅನಾವರಣಗೊಳ್ಳಲಿದೆ.

Lord Ram idol in UP
Lord Ram idol in UP

By

Published : Sep 20, 2022, 11:43 AM IST

Updated : Sep 20, 2022, 11:51 AM IST

ಅಯೋಧ್ಯೆ(ಉತ್ತರ ಪ್ರದೇಶ):ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಈಗಾಗಲೇ ಸರ್ದಾರ್‌ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ ಪಾತ್ರವಾಗಿದ್ದು, ಇದೀಗ ಆ ದಾಖಲೆ ಬ್ರೇಕ್​ ಆಗಲಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆ 251 ಮೀಟರ್​ ಇರಲಿದ್ದು, ಏಕತಾ ಪ್ರತಿಮೆಗಿಂತಲೂ 69 ಮೀಟರ್​​ ಎತ್ತರವಾಗಿರಲಿದೆ.

ಗುಜರಾತ್​ನ ನರ್ಮದಾ ನದಿಯ ದಡದ ಮೇಲಿರುವ ಸರ್ದಾರ್​ ವಲ್ಲಭಭಾಯಿ ಪಟೇಲ್​​ ಅವರ ಪ್ರತಿಮೆ 182 ಮೀಟರ್​ ಎತ್ತರದಲ್ಲಿದ್ದು, ಈಗಾಗಲೇ ಲೋಕಾರ್ಪಣೆಗೊಂಡಿದೆ. ಆದರೆ, ಇದೀಗ ನಿರ್ಮಾಣಗೊಳ್ಳುತ್ತಿರುವ ರಾಮನ ಪ್ರತಿಮೆ ಅದಕ್ಕಿಂತಲೂ ಎತ್ತರದಲ್ಲಿರಲಿದೆ ಎಂದು ಪ್ರತಿಮೆ ಸಿದ್ಧಪಡಿಸುತ್ತಿರುವ ರಾಮ್​ ವಿ ಸುತಾರ್​ ತಿಳಿಸಿದ್ದಾರೆ. ಇದಕ್ಕೋಸ್ಕರ 2 ಸಾವಿರಕ್ಕೂ ಅಧಿಕ ಕುಶಲಕರ್ಮಿಗಳು ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸರ್ದಾರ್​ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ನಿರ್ಮಾಣ ಮಾಡಿರುವ ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಿ.ಸುತಾರ್​ ಅವರು ರಾಮನ ವಿಗ್ರಹ ನಿರ್ಮಿಸಲಿದ್ದಾರೆ. ಈಗಾಗಲೇ ತಮ್ಮ ಮಗ ಅನಿಲ್ ಸುತಾರ್​ ಜೊತೆ ಅಯೋಧ್ಯೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂಬೈನಲ್ಲಿ ನಿರ್ಮಿಸಲಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ 212 ಮೀಟರ್​​ ಎತ್ತರದ ಪ್ರತಿಮೆ, 137.2 ಮೀಟರ್​ ಎತ್ತರದ ಬಾಬಾ ಸಾಹೇಬರ ಪ್ರತಿಮೆ ಮತ್ತು ಕರ್ನಾಟಕದಲ್ಲಿ 46.6 ಮೀಟರ್​ ಎತ್ತರದ ಭಗವಾನ್ ಶಿವನ ವಿಗ್ರಹ ಯೋಜನೆಯಲ್ಲೂ ಇವರು ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ:ಪ್ರವಾಸಿಗರಿಗೆ ನಿರಾತಂಕ.. ಏಕತಾ ಪ್ರತಿಮೆ ಸಂಪರ್ಕಿಸಲಿವೆ ಎಂಟು ರೈಲುಗಳು..

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸುತಾರ್​​, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ವಿಗ್ರಹವು 251 ಮೀಟರ್ ಎತ್ತರ, ಏಕತಾ ಪ್ರತಿಮೆಗಿಂತ 69 ಮೀಟರ್ ಎತ್ತರದಲ್ಲಿರುತ್ತದೆ ಎಂದು ಹೇಳಿದ್ದಾರೆ. ಗುಜರಾತ್‌ನಲ್ಲಿ ನಿರ್ಮಿಸಲಾದ ಸರ್ದಾರ್ ಪಟೇಲ್ ಅವರ ಪ್ರತಿಮೆ ಮೂರೂವರೆ ವರ್ಷಗಳಲ್ಲಿ 1,000 ನುರಿತ ಕುಶಲಕರ್ಮಿಗಳಿಂದ ತಯಾರಿಸಲಾಗಿದೆ.

ವಿಗ್ರಹ ಪ್ರತಿಷ್ಠಾಪಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಜಾಗ ಫೈನಲ್​ ಮಾಡ್ತಿದ್ದಂತೆ ನಮ್ಮ ಕೆಲಸ ಶುರುವಾಗಲಿದೆ ಎಂದಿರುವ ಅವರು, ವಿಗ್ರಹದ ಮಾದರಿಯನ್ನು 2018 ರಲ್ಲೇ ಯೋಗಿ ಆದಿತ್ಯನಾಥ್​​ ಅವರಿಗೆ ನೀಡಲಾಗಿದೆ. ವಿಗ್ರಹ ನಿರ್ಮಾಣಕ್ಕೆ ಈಗಾಗಲೇ ಅನುಮತಿ ಸಹ ಸಿಕ್ಕಿದ್ದು, ವಿಗ್ರಹ ನಿರ್ಮಾಣಕ್ಕಾಗಿ ಜಮೀನು ಗುರುತಿಸಲುವ ಕಾರ್ಯ ನಡೆಯುತ್ತಿದೆ ಎಂದರು. ಮುಂದಿನ ನಾಲ್ಕು ವರ್ಷಗಳಲ್ಲಿ ಈ ವಿಗ್ರಹ ತಲೆಎತ್ತಲಿದೆ.

Last Updated : Sep 20, 2022, 11:51 AM IST

ABOUT THE AUTHOR

...view details