ನಳಂದ(ಬಿಹಾರ): ವರ್ಷದ 355 ದಿನಗಳ ಕಾಲ ನಳಂದಾದ ಸಿಲಾವೋ ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿರುವ ಗಣಪನನ್ನು ಗಣೇಶ ಚತುರ್ಥಿಗೆ 10 ದಿನಗಳ ಕಾಲ ಹೊರಗಡೆ ತಂದು ಪೂಜಾ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಹೊರಗಡೆ ತಂದ ಗಣಪನಿಗೆ ಕೈದಿಗಳೆಲ್ಲ ಸೇರಿ ಪೂಜೆ ಮಾಡುತ್ತಾರೆ. ಕಳ್ಳರ ಕೈಯಿಂದ ತಪ್ಪಿಸಲು ಪೂಜೆ ಮುಗಿಸಿ ಮತ್ತದೇ ಠಾಣೆಯ ದೇವಾಲಯದಲ್ಲಿ ಗಣಪನನ್ನು ತೆಗೆದುಕೊಂಡು ಹೋಗಿ ಬಂಧನದಲ್ಲಿಡಲಾಗುತ್ತದೆ.
ಗಣಪತಿಯನ್ನು ಸೆರೆಯಲ್ಲಿಟ್ಟಿದ್ದೇಕೆ?:ಇಲ್ಲಿ ಪೂಜಿಸಲ್ಪಡುವ ಗಣಪ 150 ವರ್ಷಗಳಷ್ಟು ಹಳೇಯದು. ಅದಲ್ಲದೆ ಇದು ಅಮೃತಶಿಲೆಯಿಂದ ತಯಾರಾದ ಮೂರ್ತಿ. ಮೊದಲು ಮಣ್ಣಿನ ಮೂರ್ತಿ ಇತ್ತು ಎಂದು ಕೇಳಿದ್ದೆ. ಈಗ ಇರುವ ಅಮೃತಶಿಲೆಯ ಮೂರ್ತಿ ಮೇಲೆ ಕಳ್ಳರ ಕಣ್ಣು ಇದೆ. ಒಂದು ಬಾರಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿದ್ದರು. ಆದರೆ, ಜನರ ಕಣ್ಣಿಗೆ ಸಿಕ್ಕಿಬಿದ್ದು, ಮೂರ್ತಿಯನ್ನು ಕಾಪಾಡಲಾಯಿತು. ನಂತರದಲ್ಲಿ ಮೂರ್ತಿಯನ್ನು ಪೊಲೀಸ್ ಠಾಣೆ ಆವರಣದ ದೇವಸ್ಥಾನದಲ್ಲಿ ಸುರಕ್ಷಿತವಾಗಿ ಇಡಬೇಕು ಎಂದು ಸ್ಥಳೀಯರು ನಿರ್ಧರಿಸಿ, ಅಲ್ಲೇ ಇರಿಸಿದ್ದರು. ಅದೇ ಸಂಪ್ರದಾಯ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ ಎಂದು ಅರ್ಚಕ ಬಾಲ ಗೋವಿಂದ್ ರಾಮ್ ಹೇಳಿದರು.