ಕರ್ನಾಟಕ

karnataka

ETV Bharat / bharat

ಯೋಗಿ ಸರ್ಕಾರ ವಿದ್ಯುತ್​ ಬಿಲ್​ನಿಂದ ಲೂಟಿ ಹೊಡೆಯುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ - ವಿದ್ಯುತ್ ಲೂಟಿ

ಉತ್ತರಪ್ರದೇಶ ಸರ್ಕಾರ ವಿದ್ಯುತ್ ಬಿಲ್ ಮೂಲಕ ಜನರಿಂದ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

Priyanka
Priyanka

By

Published : Oct 30, 2021, 12:07 PM IST

ನವದೆಹಲಿ: ಯೋಗಿ ಆದಿತ್ಯನಾಥ ಸರ್ಕಾರವು ವಿದ್ಯುತ್​ ಬಿಲ್​ನಿಂದ ಲೂಟಿ ಮಾಡುತ್ತಿದೆ. ಇದರಿಂದ ಉತ್ತರಪ್ರದೇಶದ ಜನತೆ ತತ್ತರಿಸಿ ಹೋಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂಥ ಲೂಟಿಯನ್ನು ಕೊನೆಗೊಳಿಸಲಾಗುವುದು ಎಂದು ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.

ವಿದ್ಯುತ್​ ಇಲಾಖೆಯು ಕಾರ್ಮಿಕನೊಬ್ಬನಿಗೆ 19 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಿಲ್ ನೀಡಿದೆ. ಬಿಜೆಪಿ ಆಡಳಿತದಲ್ಲಿ ವಿದ್ಯುತ್ ಬಿಲ್​ ಮತ್ತು ಸ್ಮಾರ್ಟ್ ಮೀಟರ್ ಲೂಟಿಯಿಂದ ರಾಜ್ಯದ ಜನತೆ ನಲುಗಿ ಹೋಗಿದ್ದಾರೆ. ಜೀವನೋಪಾಯಕ್ಕಾಗಿ ಕಷ್ಟ ಪಟ್ಟು ದುಡಿಯುವ ಕುಟುಂಬಕ್ಕೆ ವಿದ್ಯುತ್ ಇಲಾಖೆಯು 19 ಕೋಟಿ 19 ಲಕ್ಷ ರೂ.ಬಿಲ್ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಭೇಟಿಯಾಗಲಿರುವ ಪ್ರಧಾನಿ ಮೋದಿ

ABOUT THE AUTHOR

...view details