ಉದಯಪುರ(ರಾಜಸ್ಥಾನ) :ಬೆಳಗ್ಗೆ ಮಣಪ್ಪುರಂ ಗೋಲ್ಡ್ ಬ್ಯಾಂಕ್ ತೆರೆದ ತಕ್ಷಣ ಐವರು ಮುಸುಕುಧಾರಿ ದುಷ್ಕರ್ಮಿಗಳು ಬ್ಯಾಂಕ್‌ಗೆ ಪ್ರವೇಶಿಸಿ ದರೋಡೆ ಮಾಡಿದ್ದಾರೆ. ಸುಮಾರು 24 ಕೆಜಿ ಚಿನ್ನಾಭರಣ ಹಾಗೂ 10 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮಣಪ್ಪುರಂ ಗೋಲ್ಡ್ ಬ್ಯಾಂಕ್ ಲೂಟಿ : 24 ಕೆಜಿ ಚಿನ್ನ ದರೋಡೆ - ಮಣಪ್ಪುರಂ ಗೋಲ್ಡ್ ಬ್ಯಾಂಕ್
ಉದಯಪುರದ ಪ್ರತಾಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಗನ್ನಿಂದ ಹೆದರಿಸಿ ಬ್ಯಾಂಕ್ ದರೋಡೆ ನಡೆಸಿದ್ದಾರೆ. ಸುಮಾರು 24 ಕೆಜಿ ಚಿನ್ನಾಭರಣ ಹಾಗೂ 10 ಲಕ್ಷ ರೂ. ಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಣಪ್ಪುರಂ ಗೋಲ್ಡ್ ಬ್ಯಾಂಕ್ ಲೂಟಿ
ಮುಸುಕುಧಾರಿ ದುಷ್ಕರ್ಮಿಗಳು ಗನ್ ಹಿಡಿದು ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರನ್ನು ಹೆದರಿಸಿ ಲೂಟಿ ಮಾಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪ್ರತಾಪ್ ನಗರ ಠಾಣೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೀಲ್ ಠಾಕೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ :ಚಿನ್ನದ ತಂತಿಗಳಿಗೆ ರೋಡಿಯಂ ಲೇಪಿಸಿ ಸಾಗಾಟ: ಕಂದಾಯ ಗುಪ್ತಚಾರ ನಿರ್ದೇಶನಾಲಯ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ