ಬಾರ್ಮರ್(ರಾಜಸ್ಥಾನ) :ಮೂವರು ಮುಸುಕುಧಾರಿಗಳು ಬ್ಯಾಂಕ್ನೊಳಗೆ ನುಗ್ಗಿ ಸಿನಿಮೀಯ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆ ಮಾಡಿರುವ ಘಟನೆ ನಡೆದಿದೆ. ಬ್ಯಾಂಕ್‌ನಲ್ಲಿದ್ದ ಸುಮಾರು 6 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಸಮದರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಂಡಪ್‌ಹಳ್ಳಿ SBI ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ನಲ್ಲಿ ಸಿಬ್ಬಂದಿ ಪ್ರತಿದಿನದಂತೆ ಕೆಲಸದಲ್ಲಿ ತೊಡಗಿದ್ದಾಗ ಮೂವರು ಮುಸುಕುಧಾರಿಗಳು ಏಕಾಏಕಿ ಬ್ಯಾಂಕ್ನೊಳಗೆ ನುಗ್ಗಿದ್ದಾರೆ.
'ಸಿನಿಮೀಯ ಸ್ಟೈಲ್'ನಲ್ಲಿ ಬ್ಯಾಂಕ್ ದರೋಡೆ.. ಇದನ್ನೂ ಓದಿರಿ:ಡೆಲ್ಲಿ ಏರ್ಪೋರ್ಟ್ನ ಬ್ರಿಡ್ಜ್ ಕೆಳಗೆ ಸಿಕ್ಕಿಕೊಂಡ ಏರ್ ಇಂಡಿಯಾ ವಿಮಾನ.. ವಿಡಿಯೋ ನೋಡಿ
ಈ ವೇಳೆ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಬ್ಯಾಂಕ್ನೊಳಗಿದ್ದವರನ್ನ ಬೆದರಿಸಿ, ಒಂದೆಡೆ ಸೇರಿಸಿದ್ದಾರೆ. ಈ ವೇಳೆ ಓರ್ವ ದುಷ್ಕರ್ಮಿ ಕ್ಯಾಶ್ ಕೌಂಟರ್ಗೆ ಪ್ರವೇಶಿಸಿ ಚೀಲದೊಳಗೆ ಹಣ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ನಡೆದ ಬಳಿಕ ಬ್ಯಾಂಕ್ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತಲುಪಿ ಸಿಸಿಟಿವಿಯ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅವರ ದುಷ್ಕೃತ್ಯ ಸೆರೆಯಾಗಿದೆ. ಮೊಬೈಲ್ನಲ್ಲಿ ದಾಖಲಾಗಿರುವ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಕೆಲ ಗುಂಪು ರಚನೆ ಮಾಡಲಾಗಿದೆ.