ಕಾನ್ಪುರ (ಉತ್ತರ ಪ್ರದೇಶ):ಇತ್ತೀಚಿನ ದಿನಗಳಲ್ಲಿ ಪ್ರಬಲ್ ರಿವಾಲ್ವರ್ ಸಾಕಷ್ಟು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅದರ ಫೀಚರ್ಗಳು. ಇದನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿರ್ಮಿಸಲಾಗಿದೆ. ಕಾನ್ಪುರದ ಸರ್ಕಾರಿ ಸ್ವಾಮ್ಯದ ಕಂಪನಿ ಅಡ್ವಾನ್ಸಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ನಲ್ಲಿ ತಯಾರಿಸಿದ ಪ್ರಬಲ್ ರಿವಾಲ್ವರ್ ಮಹಿಳೆಯರಿಗೆ ತುಂಬಾ ಅನುಕೂಲಕರ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಇದು ತೂಕದಲ್ಲಿ ತುಂಬಾ ಕಡಿಮೆ ಹಾಗೂ ಫೈರ್‌ಪವರ್‌ನಲ್ಲಿ ಹೆಚ್ಚು.
ಪ್ರಬಲ್ ರಿವಾಲ್ವರ್‌ನ ತೂಕ ಎಷ್ಟು?:ಪ್ರಬಲ್ ಹಗುರವಾದ 32 ಬೋರ್ ರಿವಾಲ್ವರ್ ಆಗಿದ್ದು, ಇದು ಮಹಿಳೆಯರಿಗೆ ತುಂಬಾ ಸೂಕ್ತವಾಗಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಕಾರ್ಟ್ರಿಡ್ಜ್‌ಗಳಿಲ್ಲದೇ ಕೇವಲ 700 ಗ್ರಾಂ ತೂಗುತ್ತದೆ. ಇದನ್ನು ಯಾರಾದರೂ ಕೂಡಾ ಆರಾಮವಾಗಿ ಸಾಗಿಸಬಹುದು. ಇದರ ಟ್ರಿಗರ್ ಪುಲ್ ಕೂಡ ತುಂಬಾ ಸುಲಭ. ಇದರ ಭಾರವು ಕಡಿಮೆಯಿ ಇವುದರಿಂದ ಮಹಿಳೆಯರು ಆರಾಮವಾಗಿ ತಮ್ಮ ಕೈಚೀಲದಲ್ಲಿ ಇಟ್ಟುಕೊಳ್ಳಬಹುದು ಮತ್ತು ತಮ್ಮ ಸುರಕ್ಷತೆಗಾಗಿ ಬಳಸಬಹುದು.
ಪ್ರಬಲ್ ರಿವಾಲ್ವರ್‌ನ ಫೈರ್‌ಪವರ್:ಪ್ರಬಲ್ ರಿವಾಲ್ವರ್‌ನ ಫೈರ್‌ಪವರ್ ಬಗ್ಗೆ ತಿಳಿದುಕೊಳ್ಳುವುದಾದರೆ, ಇದು ದೇಶದ ಎಲ್ಲ ರಿವಾಲ್ವರ್‌ಗಳಲ್ಲಿ ಅತ್ಯುನ್ನತವಾಗಿದೆ. ಪ್ರಬಲ್ ತನ್ನ ಗುರಿಯನ್ನು 50 ಮೀಟರ್‌ಗಳವರೆಗೆ ಹೊಡೆಯಬಲ್ಲದು. ಇದು ಇತರ ಎಲ್ಲ ರಿವಾಲ್ವರ್‌ಗಳಿಗೆ ಹೋಲಿಸಿದರೆ, ಎರಡೂವರೆ ಪಟ್ಟು ಹೆಚ್ಚು. ಪ್ರಸ್ತುತ, ದೇಶದ ಯಾವುದೇ ರಿವಾಲ್ವರ್‌ನ ಫೈರ್‌ಪವರ್ 20 ಮೀಟರ್‌ಗಳಿಗಿಂತ ಹೆಚ್ಚಿಲ್ಲ.
ಏನಿದು ಸೈಡ್ ಸ್ವಿಂಗ್ ಸಿಲಿಂಡರ್:ಪ್ರಬಲ್ ಭಾರತದಲ್ಲಿ ತಯಾರಾದ ಮೊದಲ ರಿವಾಲ್ವರ್ ಆಗಿದ್ದು, ಸೈಡ್ ಸ್ವಿಂಗ್ ಸಿಲಿಂಡರ್ ಹೊಂದಿದೆ. ರಿವಾಲ್ವರ್‌ನ ಮೊದಲ ಆವೃತ್ತಿಯಲ್ಲಿ, ಕಾರ್ಟ್ರಿಜ್ಡ್ಗಳನ್ನು ಸೇರಿಸಲು ಗನ್ ಅನ್ನು ತಿರುಗಿಸಬೇಕಾಗಿತ್ತು. ಆದರೆ, ಈ ರಿವಾಲ್ವರ್‌ನಲ್ಲಿ ಅದನ್ನು ಮಾಡಬೇಕಾಗಿಲ್ಲ.